17 ಜನವರಿರ ದೈನಂದಿನ ಭಕ್ತಿಚಿಂತನೆ
ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. ಯೂದನು 1:21
ನಾವು ದಿನನಿತ್ಯ ಪ್ರತಿ ಘಳಿಗೆ ದೇವರ ನೀತಿ ತತ್ವಗಳನ್ನು ನಮ್ಮ ಜೀವಿತದಲ್ಲಿ ವಿಧೇಯತ್ವದಿಂದ ಅನುಷ್ಠಾನಕ್ಕೆ ತರುವಲ್ಲಿ, ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳುವದು ಸಾಧ್ಯವಾಗುತ್ತದೆ. ನಮ್ಮ ಜೀವಿತದಲ್ಲಿ ಸಂಭವಿಸುವ ಶೋಧನೆಗಳು, ಕಷ್ಟಕಾರ್ಪಣ್ಯಗಳು, ದುಃಖ ನಿರಾಶೆಗಳು ಇವುಗಳ ದೆಸೆಯಿಂದ ಉಲ್ಲಾಸಗೊಳ್ಳುವದು ತುಂಬಾ ಕಷ್ಟಕರವಾಗಿರಬಹುದು. ಹಾಗೆಯೇ ಸುಖ, ಶಾಂತಿಗಳು ಆಗಾಗ ನಮ್ಮ ಜೀವಿತದಲ್ಲಿ ಬಂದುಹೋಗುತ್ತಿರಬಹುದು. ಆದರೆ, ದೇವರು ಈ ಎಲ್ಲಾ ಶೋಧನೆಗಳಿಂದ ನಮ್ಮನ್ನು ಪರೀಕ್ಷಿಸಿ ತಕ್ಕ ಶಿಕ್ಷಣ ಏರ್ಪಡಿಸಿ, ನಮ್ಮಲ್ಲಿರುವ ನ್ಯೂನತೆಗಳ ದರ್ಶನವಾಗುವಂತೆ ಮಾಡುತ್ತಾನೆ. ಇದಲ್ಲದೆ, ಈ ಶಿಕ್ಷಣಪೂರ್ವಕವಾದ ಬೋಧನೆಯಿಂದ ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮನ ಧರ್ಮಪ್ರಮಾಣದ ಹಾಗೂ ಸಂಪೂರ್ಣ ಪ್ರೀತಿಯ ನೋಟ ಕಾಣಬಹುದು. ಇವೆಲ್ಲಕ್ಕೂ ನಾವು ಮನಃಪೂರ್ವಕವಾಗಿ ಸ್ಪಂದಿಸುವದರ ಕಡ್ಡಾಯ ಒಳಗಾಗುವಿಕೆಯನ್ನು ದೇವರು ನಮ್ಮಿಂದ ಅಪೇಕ್ಷಿಸುತ್ತಾನೆ. R3021

