13 ಜನವರಿರ ದೈನಂದಿನ ಭಕ್ತಿಚಿಂತನೆ
ನನ್ನ ಪ್ರಿಯರಾದ ಮಕ್ಕಳೇ, ನೀವು ಪಾಪ ಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪ ಮಾಡಿದರೆ, ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸುಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ೧ ಯೋಹಾನನು 2:1
ಒಂದು ವೇಳೆ ನಮ್ಮಲ್ಲಿ ನಂಬಿಕೆ ರಹಿತವಾದ ಪರಿಸ್ಥಿತಿ ಅಥವಾ ಶಾರೀರಿಕ ಬಲಹೀನತೆ ಉಂಟಾಗಿ ಆಗ ಯಾವದಾದರೂ ಒಂದು ತಪ್ಪು ಮಾಡಿ ದೋಷಿಗಳಾಗಿ ದೇವರ ಚಿತ್ತ ಹಾಗೂ ನಮ್ಮ ವೈಯಕ್ತಿಕ, ಆಧ್ಯಾತ್ಮಿಕ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅದರ ಅರಿವು ನಮ್ಮಲ್ಲಿ ಉಂಟಾಗಿ ದೋಷ ವಿಮುಕ್ತರಾಗುವಂತೆ ನಾವು ಕೂಡಲೆ ಕ್ರಮತೆಗೆದುಕೊಂಡು ಕರ್ತನಲ್ಲಿ ಪ್ರಾರ್ಥನಾಪೂರಕವಾಗಿ ವಿಜ್ಞಾಪಿಸಿಕೊಳ್ಳಬೇಕು. ನಮ್ಮ ಬಳಿಯಲ್ಲಿ ಕ್ರಿಸ್ತನ ಅಮೂಲ್ಯ ರಕ್ತದಿಂದ ಪಾವನಗೊಳಿಸಲ್ಪಟ್ಟ ಒಂದು ಯಜ್ಞವೇದಿ ಇರುತ್ತದೆ. ಈ ಯಜ್ಞವೇದಿಯ ಮಹತ್ವ ಏನಂದರೆ, ಅಬ್ರಹಾಮ ಪ್ರಾಣಿಗಳನ್ನು ವಧಿಸಿ ಅವುಗಳ ರಕ್ತದಿಂದ ಪ್ರೋಕ್ಷಿತಮಾಡಿ ಕಟ್ಟಿದ ಯಜ್ಞವೇದಿಗಿಂತ ನಮ್ಮ ಯಜ್ಞವೇದಿಯು ಅತಿಶ್ರೇಷ್ಠವಾಗಿದೆ. ಹೀಗಿರಲಾಗಿ, ಅಪೋಸ್ತಲನು ಹೇಳಿದ ಪ್ರಕಾರ “ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಜಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ.” (ಇಬ್ರಿಯರಿಗೆ 4:16)-Z ’01, 233 (R2847). R2848

