15 ಜನವರಿರ ದೈನಂದಿನ ಭಕ್ತಿಚಿಂತನೆ
ಮನುಷ್ಯನೇ ಒಳ್ಳೆಯದು ಇಂಥದೇ ಎಂದು ಯೆಹೋವನೇ ನಿನಗೆ ತೋರಿಸಿದ್ದಾನಷ್ಟೆ. ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು? ಮಿಕ 6:8
ದೇವರು ನಮ್ಮಿಂದ ಅಪೇಕ್ಷಿಸಿರುವದು, ನಾವು ಸಾಧಾರಣವಾಗಿ ಏನನ್ನು ಆತನಲ್ಲಿ ಒಪ್ಪಿಸುತ್ತೇವೋ, ಅದು ಸರ್ವವೇದ್ಯವಾಗಿರುತ್ತದೆ. ಇದಕ್ಕಿಂತ ಕಡಿಮೆಯಾಗಿರುವದನ್ನು ದೇವರು ಕೇಳಿಕೊಳ್ಳುವದಿಲ್ಲ. ಯಾಕಂದರೆ, ಯಾರಿಂದ ಲೋಕದವರಿಗೆ ನ್ಯಾಯವಿಚಾರಣೆ ಆಗಬೇಕೆಂದು ಅವರಿಗೆ ತರಬೇತಿ ನೀಡಲಾಗಿದೆಯೋ ಅವರು ದೇವರಿಗೆ ಅಪೇಕ್ಷಿತವಾಗಿರುವದನ್ನು ಸಲ್ಲಿಸುವದರ ಜವಾಬ್ದಾರಿ ಇರುವದು. ಮೇಲ್ಕಂಡ ಮೂರು ವಿಷಯಗಳು ನೆರವೇರಿಸುವದನ್ನು ಪ್ರೀತಿಯೆಂಬ ಒಂದೇ ಪದದಲ್ಲಿ ಅಡಕಗೊಂಡಿರುವದನ್ನು ಇಲ್ಲಿ ಕಾಣಬಹುದು. ನಾವು ನಮ್ಮ ನೆರೆಯವರೊಂದಿಗೆ, ಸಹೋದರರೊಂದಿಗೆ, ನಮ್ಮ ಕುಟುಂಬದ ಸದಸ್ಯರೊಂದಿಗೆ ಹಾಗೆ ನಮ್ಮೊಂದಿಗೆ ನ್ಯಾಯಬದ್ಧ ಕ್ರಮದಿಂದ ನಡೆದುಕೊಳ್ಳಬೇಕು ಎಂಬದನ್ನೆ ಪ್ರೀತಿಯು ಒತ್ತಾಯಪೂರ್ವಕವಾಗಿ ಅಪೇಕ್ಷಿಸುತ್ತದೆ. ಹಾಗೆ ನಾವು ಇತರರ ಹಕ್ಕುಭಾದ್ಯತೆಗಳು ಅಂದರೆ, ಅವರ ಭೌತಿಕ, ನೈತಿಕ, ಜ್ಞಾನದ ಮತ್ತು ಸ್ವಾತಂತ್ರö್ಯಕ್ಕೆ ಸಂಬಂಧಿಸಿದಂತಹವುಗಳನ್ನು ಗೌರವದಿಂದ ನೋಡಿಕೊಳ್ಳುವದನ್ನು ಕಲಿಯಬೇಕು. ಹೀಗೆ ಮಾಡುವದರಿಂದ, ನಾವು ಮೇಲ್ಕಂಡ ಹಕ್ಕುಭಾದ್ಯತೆ ಆಚರಣೆಗೆ ಯಾವ ರೀತಿಯಿಂದಲೂ ಧಕ್ಕೆ ಆಗುವದಿಲ್ಲ-Z ’02, 172 R3020

