3 ಜನವರಿರ ದೈನಂದಿನ ಭಕ್ತಿಚಿಂತನೆ
ಎಡೆಬಿಡದೆ ಪ್ರಾರ್ಥನೆ ಮಾಡಿರಿ. ೧ ಥೆಸಲೊನೀಕದವರಿಗೆ 5:17
ನಾವು ದೇವರಿಗೆ ಸಲ್ಲಿಸುವಂಥ ಪ್ರಾರ್ಥನೆಗಳಲ್ಲಿ ಸಹಜವಾದ ಖಚಿತ ನಿರ್ಧಾರಗಳು, ಒತ್ತಾಯಿಸುವಿಕೆ ಹೇಗಾದರೂ ಇರಬಹುದು. ಆದರೆ, ಇದರಲ್ಲಿ ವೇದೋಕ್ತಿಗಳ ಸೂಚನೆಗಳನ್ನು ಇವುಗಳಲ್ಲಿ ಅಳವಡಿಸುವದು ಬಹಳ ಮುಖ್ಯವಾದದ್ದು ಆಗಿದೆ. ನಮ್ಮಲ್ಲಿ ನಾನಾ ತೆರನಾದ ಸ್ವಭಾವಸಿದ್ಧ ಮನದಾಳಗಳು ಇದ್ದರು ಅವುಗಳನ್ನು ಮನಸ್ಸಿಗೆ ತಾರದೆ, ನಾನು ಚಿಕ್ಕ ಮಕ್ಕಳ ಹಾಗೆ, ಮೇಲಿನಿಂದ ಬರುವಂಥ ದೈವ ನಿರ್ದೇಶನಗಳನ್ನು ನಮ್ಮ ಅಭಿಪ್ರಾಯಗಳು ಹಾಗೂ ನಡತೆಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವದು ಅವಶ್ಯ. ಇದಲ್ಲದೆ, ನಮ್ಮ ಕರ್ತನು ನುಡಿದಂತೆ “ಬೇಡಿಕೊಳ್ಳಿರಿ [ಇದನ್ನು ಕರ್ತನ ಹೆಸರಿನಲ್ಲಿ] ನಿಮಗೆ ಸಿಕ್ಕುವದು. ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು. ಯೋಹಾನ 16:24 ವಿಧೇಯರಾಗಿ, ನಂಬಿಗಸ್ತರಾಗಿ ಯಾರಾರು ಇರುವರೋ ಅವರು ಆತನನ್ನು ಏನೇನು ಬೇಡಿಕೊಳ್ಳುತ್ತಾರೋ. ಅವರಿಗಾಗಿ ಪರಲೋಕದ ತಂದೆಯ ಭಂಡಾರದಲ್ಲಿ ಅಗಣಿತ ಕೃಪಾವರಗಳ ಆಶೀರ್ವಾದ ನಿಧಿಗಳು ತುಂಬಿರುತ್ತವೆ-Z ’96, 162 (R2004). R2005

