19 ಜನವರಿರ ದೈನಂದಿನ ಭಕ್ತಿಚಿಂತನೆ
ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ. ದಿನವೆಲ್ಲಾ ಅದೇ ನನ್ನ ಧ್ಯಾನ. ಕೀರ್ತನೆಗಳು 119:97
ದೇವರ ವಾಕ್ಯದ ಅಧ್ಯಯನ ಮಾಡುವ ಕ್ರೆöೈಸ್ತರಿಗೆ ಇದಕ್ಕಿಂತ ಉತ್ತಮವಾದ ಸೌಕರ್ಯ ಬೇರೊಂದಿಲ್ಲ. ಆದರೆ, ವಾಕ್ಯದ ಹೆಚ್ಚಿನ ಅಧ್ಯಯನ ಉದ್ದೇಶರಹಿತವಾಗಿದೆ. ದೇವರ ವಾಕ್ಯವನ್ನು ಓದಿ ಅದರ ಪ್ರಕಾರ ನಡೆಯದಿದ್ದರೆ, ಇದಕ್ಕಿಂತ ವ್ಯರ್ಥ ಕಾಲಹರಣ ಇನ್ನೊಂದಿಲ್ಲ. ಕರ್ತನ ಜನರು ದೇವರ ಯೋಜನೆಯ ವಿವಿಧ ಭಾಗಗಳ ಸುಜ್ಞಾನ ಪಡೆಯುವದಕ್ಕೆ ಸಕಾರಣವುಳ್ಳ ಅವಕಾಶ ಹೊಂದುವಲ್ಲಿ ಹಿಂಜರಿಯಬಾರದು. ಇದರಲ್ಲಿ ತ್ಯಾಗ ಮಾಡುವ ಸಂದರ್ಭವೂ ಇರುತ್ತದೆ. ಆದರೆ, ದೇವರ ಮಕ್ಕಳು ತಮಗಿರುವ ಅನುಕೂಲಗಳ ಸವಲತ್ತುಗಳನ್ನು ಇದರ ಪರವಾಗಿ ತ್ಯಾಗ ಮಾಡುವಂತೆ ಆಗಬೇಕೆ ಹೊರತು ಇತರರ ಅನುಕೂಲ ಸವಲತ್ತುಗಳ ದುರುಪಯೋಗ ಯಾವ ಕಾರಣಕ್ಕೂ ಮಾಡುವಂತಿಲ್ಲ. ಸತ್ಯವೇದ ಅಧ್ಯಯನವನ್ನು ಇತರರ ಸಮಯ ಹಾಳು ಮಾಡುವದಕ್ಕೆ ಉಪಯೋಗಿಸುವದು ತನ್ನ ಸ್ವಾರ್ಥತೆಯ ಧ್ಯೋತಕವಾಗಿರುವದೇ ಹೊರತು ದೇವರಾತ್ಮ ಪ್ರೀತಿಯ ಭಾವನೆ ಹೆಚ್ಚಾಗಿ ವಾಸವಾಗಿರುವದು ಎಂಬ ಅರ್ಥ ಬರುವದಿಲ್ಲ. R2488

