18 ಜನವರಿರ ದೈನಂದಿನ ಭಕ್ತಿಚಿಂತನೆ
ಜಾಗ್ರತೆ ಬೇಕಾದಲ್ಲಿ ಆಲಸ್ಯವಾಗಿರದೆ ಆಸಕ್ತ ಚಿತ್ತರಾಗಿದ್ದು ಕರ್ತನ ಸೇವೆ ಮಾಡುವವರಾಗಿರ್ರಿ. ರೋಮಾಪುರದವರಿಗೆ 12:11
ದೇವರು ನೇಮಿಸಿರುವ ಓಟದ ಪಂದ್ಯದಲ್ಲಿ ಗೆಲ್ಲಬೇಕೆಂದು ಓಡುವವರು ಮುಖ್ಯವಾಗಿ ಕರ್ತನ ಸೇವೆಯಲ್ಲಿ ತೊಡಗಿರುವಾಗ ಆಸಕ್ತ ಚಿತ್ತರಾಗಿದ್ದು, ಅಭಿಮಾನದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ನಮಗಿರುವ ಕೌಶಲ್ಯವನ್ನು ಪ್ರಾಪಂಚಿಕ ಚಿಂತೆಗಳ ಅಡಿಯಲ್ಲಿ ಹಾಗೂ ಆತಂಕ ಅಡಚಣೆಗಳನ್ನು ಬಚ್ಚಿಡುವದಾದರೆ, ನಾವು ಕರ್ತನ ಸೇವೆಯಲ್ಲಿ ತೊಡಗಿರುವದಕ್ಕೆ ಯಾವ ಅರ್ಥವೂ ಇರುವದಿಲ್ಲ. ಇದೇ ರೀತಿಯಲ್ಲಿ ನಮ್ಮ ಕೌಶಲ್ಯವನ್ನು ನಮ್ಮ ಸ್ವಂತಿಕೆಗೆ ಆಗಲಿ ಅಥವಾ ಕುಟುಂಬದ ಸದಸ್ಯರಲ್ಲಾಗಲಿ, ಈ ಕೆಳಕಂಡ ಅಂಶಗಳು ಅಂದರೆ, ದೇವರಲ್ಲಿ ನಮ್ಮ ಪ್ರತಿಷ್ಠೆಯ ಸಮಯವನ್ನು ವಿಜ್ಞಾನ, ತತ್ವಶಾಸ್ತ್ರ, ಸಂಗೀತ ಕಲೆ ವ್ಯವಹಾರಗಳು, ರಾಜಕೀಯ, ವೈಭವ ವಿಲಾಸಗಳು ಹೆಮ್ಮೆಪಡುವ ಆಸೆ ಆಕಾಂಕ್ಷೆಗಳಲ್ಲಿ ಕಳೆಯುವದಾದರೆ, ನಾವು ಅಪನಂಬಿಗಸ್ತರಾದ ಸೇವಕರಾಗಿ ಹೊರಗಿನ ಕತ್ತಲೆಯೊಳಗೆ ತಳ್ಳಲ್ಪಡುತ್ತೇವೆ-Z ’91, 9 (R1281). R1285

