10 ಜನವರಿರ ದೈನಂದಿನ ಭಕ್ತಿಚಿಂತನೆ
ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಿಂದ ಮಾತಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ. ಯಾಕೋಬನು 5:10
ಸರಿಯಾದ ಸತ್ಯವಾದ ಮಾರ್ಗ ಈಗಲೂ ಇಕ್ಕಟ್ಟಾದ ಮಾರ್ಗವಾಗಿ ಪರಿಣಮಿಸಿ, ಒಬ್ಬನು ತನ್ನನ್ನು ತಗ್ಗಿಸಿಕೊಂಡು ಹಾಗೇ ನಿರಾಕರಿಸಿಕೊಂಡು, ಅದು ದೈನ್ಯತೆ ಸಾತ್ವಿಕತ್ವಗಳಿಂದ ಕೂಡಿದ್ದು, ಇದೇ ಮಾರ್ಗದಲ್ಲಿ ನಡೆಯುವಲ್ಲಿ ಹೆಚ್ಚಿನ ಬಲತ್ರಾಣಗಳನ್ನು ವ್ಯಯಿಸಿಬೇಕಾಗುತ್ತದೆ. ಅಂದರೆ, ವರ್ಷ ವರ್ಷಕ್ಕೆ ಈ ಮಾರ್ಗದಲ್ಲಿ ಕ್ರಮಿಸಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಹೀಗೆ ನಾವು ಈ ಮಾರ್ಗದಲ್ಲಿ ನಡೆದುಹೋಗುವಲ್ಲಿ, ಹೆಚ್ಚಿನ ಕೃಪೆ, ಜ್ಞಾನ ತಿಳುವಳಿಕೆಯಲ್ಲಿ ಪ್ರಗತಿ ಹೊಂದುವಾಗ ನಮ್ಮಲ್ಲಿ ಸಹಜವಾಗಿ ಹೆಮ್ಮೆ, ಗರ್ವ ಉಬ್ಬಿಕೊಳ್ಳುವದು, ದುಡುಕಿ ನಡೆದುಕೊಳ್ಳುವದು ಇಂಥ ಅವಗುಣಗಳು ಉದ್ಭವಿಸುವದುಂಟು. ನಾವು ಎಷ್ಟರಮಟ್ಟಿಗೆ ದೇವರ ಸೇವಾಕಾರ್ಯಗಳು ನಂಬಿಕೆ, ನಿರೀಕ್ಷೆ, ಪ್ರೀತಿ ಇವುಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಹೋಗುವೆವೋ ಅಷ್ಟೇ ವೇಗದಿಂದ ಸೈತಾನನು ವಿರೋಧ ಒಡ್ಡುತ್ತಾನೆ. ಅದೇ ರೀತಿಯಲ್ಲಿ ಅವನ ರಾಯಭಾರಿಗಳು ನಮ್ಮನ್ನು ಹಿಂದಿನಿಂದ ದೂಷಿಸುವದು, ಇಲ್ಲಸಲ್ಲದ ಆರೋಪ ಮಾಡುವದು, ಇವುಗಳ ಮೂಲಕ ನಮಗೆ ನೋವು ಉಂಟಾಗುವಂತೆ ಮಾಡುತ್ತಾರೆ. ಇವೆಲ್ಲವನ್ನು ಸಹಿಸಿಕೊಳ್ಳುವಾಗ ನಾವು ಹೆಚ್ಚಿನ ತಾಳ್ಮೆ ವಹಿಸಬೇಕಾಗುತ್ತದೆ-Z ’95, 3 R1751

