5 ಜನವರಿರ ದೈನಂದಿನ ಭಕ್ತಿಚಿಂತನೆ
ದೇವರೇ ನಿನ್ನನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೆ ಬಂದವು. ರೋಮಾಪುರದವರಿಗೆ 15:3
ಯಾವ ರೀತಿಯಿಂದ ಕ್ರಿಸ್ತನು ತನ್ನ ಮೇಲೆ ಬಂದ ದೂಷಣೆಗಳ ಬಾರ ಹೊತ್ತು ಸಹಿಸಿದನೋ ನಾವೂ ಸಹ ಅಂಥಹ ದುರವಸ್ಥೆ ಅನುಭವಿಸುವದನ್ನು ಅನುಸರಿಸಬೇಕು. ನಮ್ಮನ್ನು ಹೀಗೆ ನಡಿಸಿಕೊಂಡವರಿಗಾಗಿ, ದೇವರಲ್ಲಿ ಪ್ರಾರ್ಥಿಸುವದಲ್ಲದೆ, ಅವರ ತಪ್ಪಿನ ಅರಿವಾಗಿ ಪಶ್ಚಾತ್ತಾಪಪಟ್ಟಲ್ಲಿ ದೇವರು ಒಂದು ವೇಳೆ ಅವರಿಗೆ ಕರುಣೆ ತೋರಿಸಬಹುದು. ಇದರಲ್ಲಿ ನಮ್ಮ ತಾಳ್ಮೆ, ಭಕ್ತಿಭಾವಗಳು ಆವರಿಸಿ ಆತನ ಸೇವೆಯಲ್ಲಿ ನಿಷ್ಠಾವಂತ ಸೈನಿಕರಂತೆ ನಾವು ಕಾಣಿಸಿಕೊಳ್ಳಬೇಕು. ಕ್ರಿಸ್ತನು ಈ ಲೋಕದಲ್ಲಿದ್ದಾಗ, ಮಾನವ ಭ್ರಷ್ಟತೆ ಹೆಚ್ಚಿರುವದನ್ನು ನೋಡಿ ಆಶ್ಚರ್ಯಪಡಲಿಲ್ಲ. ತಾನಿದ್ದ ಲೋಕವು ಪಾಪದ ದೆಸೆಯಿಂದ ದ್ವೇಷ ಪೂರಿತವಾಗಿದ್ದು, ಕತ್ತಲೆಯ ಅಧಿಪತಿ ಸೈತಾನನ ವಶಕ್ಕೆ ಒಳಪಟ್ಟಿದ್ದು ಎಂದು ಆತನಿಗೆ ತಿಳಿದಿತ್ತು. ಆದ್ದರಿಂದ, ಇದರ ಪರಿಣಾಮವಾಗಿ ತನ್ನ ಮೇಲೆ ದೂಷಣೆಗಳು, ಪರಿಹಾಸ್ಯ, ಹಿಂಸೆ ಇವುಗಳು ಬಂದಿವೆ ಎಂಬದು ಆತನಿಗೆ ಮೊದಲೇ ತಿಳಿದಿತ್ತು. ಇವೆಲ್ಲವನ್ನು ಆತನು ಮಹಾಪ್ರೀತಿಯಿಂದ ತನಗೆ ಬಾಧೆಗಳಾದರೂ ಸಹಿಸಿಕೊಂಡು ತನ್ನ ಕರುಣೆ ಮಾನವೀಯತೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದನು-Z ’96, 83 (R1963). R1964

