30 ಜನವರಿರ ದೈನಂದಿನ ಭಕ್ತಿಚಿಂತನೆ
ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. ಲೂಕನು 18:1
ನಾವು ದೇವರ ಸನ್ನಿಧಿಗೆ ಬರುವಾಗ, ಆತನು ಬೇರೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಕಾರ್ಯನಿರತನಾಗಿರುತ್ತಾನೆ ಎಂಬ ಆತಂಕ ನಮಗೆ ಇರಕೂಡದು. ಹಾಗೆಯೇ, ನಾವು ಕೇವಲ ಅಲ್ಪಪ್ರಮಾಣದ ಕೋರಿಕೆಗಳ ಬಗ್ಗೆ ಆತನಲ್ಲಿ ಬೇಡುವಾಗ, ದೇವರು ನಮ್ಮ ವಿಷಯದಲ್ಲಿ ಬೇಸರಿಕೆ ವಹಿಸುವನು ಎಂಬದಾಗಿಯೂ ತಿಳಿಯಬಾರದು. ಇಂಥ ಸಂಗತಿಗಳನ್ನು ನಮ್ಮ ಮನಸ್ಸಿನಿಂದ ತೆಗೆದುಹಾಕುವದರ ಸಲುವಾಗಿ ಸ್ವಾಮಿಯು ಆಗ್ರಹಿಸುವ ಈ ವಿಧವೆಯ ಸಾಮ್ಯವನ್ನು ಹೇಳಿದ್ದು. ಈ ರೀತಿ ವಿಧವೆಯು ತನ್ನ ಹಟಬಿಡದೆ ನ್ಯಾಯಕ್ಕಾಗಿ ಒತ್ತಾಯಿಸಿದರಿಂದ ಆಕೆಯ ಮೊರೆಯನ್ನು ಲಾಲಿಸಿದಂತಾಯಿತು. ಹೀಗೆ ಮಾಡುವದರಿಂದ ನಾವು ನಮ್ಮ ಬೇಡಿಕೆಗಳ ಬಗ್ಗೆ ಹೆಚ್ಚು ಉತ್ಸಾಹ ವಹಿಸಿ, ನಮ್ಮ ಪ್ರಾರ್ಥನೆಗಳ ಸಫಲತೆ ಒಂದಲ್ಲ ಒಂದು ದಿವಸ ಲಭಿಸುವದು ಎಂಬ ನಂಬಿಕೆಯು ಮೂಡುತ್ತದೆ. ಒಂದು ವೇಳೆ ದೇವರಿಂದ ಉತ್ತರ ಸಿಗುವದು ತಡವಾದರೆ, ನಾವು ಬೇಸರದಿಂದ ನಂಬಿಕೆ ಕಳಕೊಂಡು ಕ್ಷೀಣವಾಗುವದಾಗಲಿ ಉತ್ಸಾಹವಿಲ್ಲದೆ ಕಳೆಗುಂದಬಾರದು. ದೇವರ ಕಾರ್ಯಗಳೆಲ್ಲವೂ ಕಾಲಗತಿಗನುಸಾರವಾಗಿ ನಡೆಯತಕ್ಕದ್ದರಿಂದ ಈ ರೀತಿ ಪ್ರಾರ್ಥನೆಗಳು ನೆರವೇರುವದರಲ್ಲಿ ವಿಳಂಬಗಳು ಆಗುವದು ಸಹಜ-Z ’95, 214 (R1864). R1865

