16 ಜನವರಿರ ದೈನಂದಿನ ಭಕ್ತಿಚಿಂತನೆ
ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ರೋಮಾಪುರದವರಿಗೆ 12:12
ದೇವರಿಗೆ ಬೇಸರಗೊಳ್ಳದಂತೆ ಪ್ರಾರ್ಥಿಸುವದು ನಮಗಿರುವ ಆಶೀರ್ವಾದದಾಯಕ ಸವಲತ್ತು. ಯಾವ ಸ್ಥಳದಲ್ಲಿಯಾಗಲಿ, ಯಾವ ಸಂದರ್ಭದಲ್ಲಿಯೇ ಆಗಲಿ ದೇವರಿಗೆ ಮೊರೆ ಹೋಗುವಲ್ಲಿ, ಹೃತ್ಪೂರ್ವಕ, ಮನಃಪೂರ್ವಕವಾಗಿ ವಿಜ್ಞಾಪಿಸಿಕೊಳ್ಳುವದು ಪ್ರತಿನಿತ್ಯ ಪ್ರತಿಗಳಿಗೆ ನಡೆಯುವಲ್ಲಿ ದೇವರು ಮತ್ತು ನಮ್ಮ ಕರ್ತನಾದ ಯೇಸುವೂ ನಮ್ಮಲ್ಲಿ ನೆಲೆಗೊಂಡಿದ್ದಾನೆ ಎಂಬ ಅಂಶ ನಮ್ಮಲ್ಲಿ ದೃಢಪಡುತ್ತದೆ. ದೇವರ ದೃಷ್ಟಿಯಿಂದ ಮರೆಯಾಗದೆ ಆಯಾ ದಿನಕ್ಕೆ ಸಂಬಂಧಿಸಿದ ಕರ್ತವ್ಯವು ನೆರವೇರಿಸಿದ ನಂತರ (ಆಯಾ ದಿನಕ್ಕೆ ಸಂಬಂಧಿಸಿದ ಕರ್ತವ್ಯವನ್ನು ದೇವರ ದೃಷ್ಟಿಯಿಂದ ಮರೆಯಾಗದೆ ನೆರವೇರಿಸಿದ ನಂತರ) ನಮ್ಮ ಏಕಾಂತ ಕೋಣೆಯೊಳಗೆ ಪ್ರವೇಶಿಸಿ ದೇವರಲ್ಲಿ ನಮ್ಮ ಕಷ್ಟ ಕಾರ್ಪಣ್ಯಗಳ ಅರಿಕೆ ಮಾಡುವದು ಸಹ ಒಂದು ಅಮೂಲ್ಯವಾದ ಸತ್ಕಾರ್ಯವೇ ಆಗಿದೆ. ಇದನ್ನು ಪೂರೈಸುವಲ್ಲಿ ನಮ್ಮ ಆತ್ಮದಾಹ ಹೃದಯತಾಪ ನೀಗಿಸುವದಕ್ಕೆ ಪೂರ್ಣ ಸಹಾಯ ಒದಗಿಬರುತ್ತದೆ-Z ’95, 215 (R1864). R1866

