4 ಜನವರಿರ ದೈನಂದಿನ ಭಕ್ತಿಚಿಂತನೆ
ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಧೃಡವಾಗಿರು, ನಿನ್ನ ಹೃದಯವು ಧೈರ್ಯದಿಂದಿರಲಿ, ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು. ಕೀರ್ತನೆಗಳು 27:14
ದೇವರ ಯೋಜನೆಗಳ ಕಾರ್ಯನಿರ್ವಹಣೆಗಳಲ್ಲಿ ಕಾಲ ಅಥವಾ ಸಮಯ ಎಂಬುದು ಬಹಳ ಮುಖ್ಯವಾದದ್ದು, ನಾವು ದೇವರಿಂದ ನಿರೀಕ್ಷಿಸಿಕೊಂಡ ಆಶೀರ್ವಾದಗಳ ಅನುಭವ ತಡವಾಗಿ ಬರುವಾಗ ನಮ್ಮ ಸಹನೆಯ ಪರೀಕ್ಷೆ ಆಗುವಲ್ಲಿ ಇದರಿಂದ ನಾವು ನಿರಾಶೆಗೊಳ್ಳಬಾರದು. ದೇವರು ಈ ಭೂಮಿಯನ್ನು ಕ್ರಮಪಡಿಸಿ ಮನುಷ್ಯರ ನಿವಾಸ ಯೋಗ್ಯ ಮಾಡುವದಕ್ಕಾಗಿ ಸಮಯ ತೆಗೆದುಕೊಳ್ಳಬೇಕಾಯಿತು. ಲೋಕದ ಜನರಿಗೆ ಕೆಟ್ಟತನದಿಂದ ಅನುಭವದ ನೀತಿಪಾಠ ಕಲಿಯಲಿಕ್ಕೆ ಸಮಯ ಬೇಕಾಗಿತ್ತು. ಯೇಸುಕ್ರಿಸ್ತನು ಲೋಕರಕ್ಷಕನಾಗಿ ಬರುವದಕ್ಕೆ ತಯಾರಿಕೆ ನಡೆಸುವದಕ್ಕೆ ಸಮಯ ಸರಿಯಬೇಕಾಗಿತ್ತು. ಕ್ರಿಸ್ತನ ಸಭೆಯವರು ತಮ್ಮನ್ನು ಸಿದ್ಧಪಡಿಸಿಕೊಂಡು ದೇವರ ರಾಜ್ಯದಲ್ಲಿ ಮಹಿಮೆಗೊಂಡ ಆಳ್ವಿಕೆ ನಡಿಸುವದಕ್ಕೆ ಸಹ ಸಮಯದ ಅವಶ್ಯಕತೆ ಇತ್ತು. ಕಡೇದಾಗಿ, ದೇವ ಜನರು ವೈಯಕ್ತಿಕವಾಗಿ ತಮ್ಮ ತಮ್ಮ ಜೀವನ ಕ್ರಮಗಳನ್ನು ಸರಿಪಡಿಸಿಕೊಳ್ಳುವದಕ್ಕೂ ಕಾಲದ ಅವಶ್ಯಕತೆ ಇರುವದು. ನಮ್ಮ ಪ್ರಾರ್ಥನೆಗಳಿಗೆ ದೇವರು ಸೂಕ್ತ ಉತ್ತರ ಕೊಡುವದು ವಿಳಂಬಗೊಂಡರೂ, ಇದನ್ನು ಆತನು ಮರೆಯುವ ಹಾಗಿಲ್ಲ. ಯಾವಾತನು ಗುಬ್ಬಿಗಳು ನೆಲಕ್ಕೆ ಬೀಳದಂತೆ ನೋಡಿಕೊಂಡು ಮತ್ತು ನಮ್ಮ ತಲೆಕೂದಲುಗಳ ಕ್ಷೇಮ ಕಾಪಾಡಿಕೊಂಡು ಎಚ್ಚರವಹಿಸುವಲ್ಲಿ, ನಮ್ಮ ಅವಶ್ಯಕತೆಗಳಿಗಾಗಿ ಕ್ಷೀಣ ಧ್ವನಿಯಿಂದ ಕೂಗಿಕೊಳ್ಳುವದನ್ನೂ ಸಹ ಆತನು ಅಲಕ್ಷö್ಯ ಮಾಡುವದಿಲ್ಲ-Z ’95, 20 (R1759). R1760

