27 ಜನವರಿರ ದೈನಂದಿನ ಭಕ್ತಿಚಿಂತನೆ
ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು. ಙ್ಞಾನೋಕ್ತಿಗಳು 4:23
ಪಾಪವೆಂಬದನ್ನು ಕೆಟ್ಟದ್ದರ ವಿವಿಧ ಸ್ವರೂಪಗಳು ಎಂಬದಾಗಿ ನಾವು ಪರಿಗಣಿಸುವದಷ್ಟೇ ಸಾಲದು ಅದಕ್ಕೆ ವಿರುದ್ಧವಾಗಿ ಎದುರಿಸಿ ನಿಲ್ಲುವಂತೆ ಮನಸ್ಸು ಮಾಡುವ ದೃಢತೆ ಇರಬೇಕು. ಯಾಕಂದರೆ, ಅದು ಕರ್ತನ ನಿಷೇಧಕ್ಕೆ ಒಳಗಾಗಿದೆ. ದೇವರು ಯಾವ ಯಾವದನ್ನು ಅನುಮೋದನೆ ಮಾಡುವದಿಲ್ಲವೋ ಅಂಥಹವುಗಳನ್ನು ಇಷ್ಟಪಡುವದನ್ನು ನಮ್ಮ ಹೃದಯದೊಳಗಿಂದ ಕಿತ್ತು ಎಸೆಯುವದು ಸಹ ಅಷ್ಟೇ ಮುಖ್ಯವಾದದ್ದು. ಇದರ ದೆಸೆಯಿಂದ, ಕ್ರಿಸ್ತ ಯೇಸುವಿನ ಅನುಯಾಯಿಗಳ ಜೀವಿತ ಹೃದಯಗಳಲ್ಲಿ ಎಂಥ ಸ್ವಚ್ಚತೆ ಮೂಡುತ್ತದೆ! ಅವರ ಭಾವನೆಗಳು ಸಹ ಶುದ್ಧೀಕರಣ ಹೊಂದುವಂತೆ ಆಗುತ್ತದೆ. ಅನೇಕರು ಇಂಥ ವಿಷಯಗಳ ಬಗ್ಗೆ ಗಮನ ಕೊಡದೇ ಇದ್ದಲ್ಲಿ ಅವರು ತಮ್ಮನ್ನೇ ಶೋಧನೆಗಳಿಗೆ ಸಿಲುಕಿಸಿಕೊಂಡು ತೊಂದರೆ ಅನುಭವಿಸುವಂತಾಗುತ್ತದೆ. ಇದಲ್ಲದೆ, ಅಂಥವರು ಹೊರಗಿನ ತೋರಿಕೆಗೆ ದುರಾಚಾರಗಳನ್ನು ತ್ಯಜಿಸಿರುವಂತೆ ಕಾಣಿಸಿಕೊಂಡು ತಮ್ಮ ಹೃದಯಗಳಲ್ಲಿ ದೇವರಿಂದ ಬಹಿಷ್ಕøತವಾದವಗಳನ್ನು ಬಯಸಿ, ಗುಪ್ತದಲ್ಲಿ, ಸ್ವಂತ ಮಾಡಿಕೊಳ್ಳುವ ಹಂಬಲ ಹೊಂದಿರುತ್ತಾರೆ-Z ’99, 140 (R2479). R2480

