20 ಜನವರಿರ ದೈನಂದಿನ ಭಕ್ತಿಚಿಂತನೆ
ನೀವು ಶಿಕ್ಷಿತರಾಗುವದಕ್ಕಾಗಿಯೇ ನಿಮಗೆ ಶಿಕ್ಷೆಯಾಗುತ್ತದೆಂದು ತಿಳಿದು ಅದನ್ನು ಸಹಿಸಿಕೊಳ್ಳಿರಿ. ದೇವರು ನಿಮ್ಮನ್ನು ಮಕ್ಕಳೆಂದು ನಡಿಸುತ್ತಾನೆ. ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿ? ಇಬ್ರಿಯರಿಗೆ 12:7
ಗುಣ, ನಡತೆ ಇವುಗಳನ್ನು ನಾವು ಪೂರ್ಣವಾಗಿ ಹೊಂದಿಕೊಳ್ಳಬೇಕಾದರೆ, ಶೋಧನೆಗಳಿಗೆ ಒಳಗಾಗುವದು ಅಗತ್ಯ. ಆರಂಭದಲ್ಲಿ ಅದು ಮೊಳಕೆಯಾಗಿ ಅತಿ ಸೂಕ್ಷö್ಮವಾಗಿರುತ್ತದೆ. ದೇವರ ಪ್ರೀತಿಯೆಂಬ ಸೂರ್ಯನ ಬೆಳಕು ಅದರ ಮೇಲೆ ಹೆಚ್ಚಾಗಿ ಬೀಳುವದು ಅವಶ್ಯ. ಜೊತೆಗೆ ದೇವರ ಕೃಪೆಯೆಂಬ ವರ್ಷಧಾರೆಯ ಅಗತ್ಯವಿದೆ. ದೇವರ ಕೃಪಾ ಲಕ್ಷಣಗಳ ಸುಜ್ಞಾನವೆಂಬದರ ನಂಬಿಕೆಯ ಅಸ್ತಿವಾರದ ಆಧಾರವಿದ್ದು, ವಿಧೇಯತ್ವದ ಸ್ಪೂರ್ತಿಯ ಸಹಾಯದಿಂದ ಬೆಳವಣಿಗೆ ಸಹಜವಾಗಿ ಪ್ರಗತಿ ಸಾಧಿಸುತ್ತದೆ. ಈ ಅನುಕೂಲಕರವಾದ ಸನ್ನಿವೇಶಗಳ ಆಡಳಿತದಲ್ಲಿ ಚೆನ್ನಾಗಿ ಚಿಗುರಿಕೊಂಡು ಶಿಸ್ತು ಎಂಬ ಶುದ್ಧೀಕರಣಕ್ಕೆ ಸಿದ್ಧವಾಗುತ್ತದೆ. ಹಾಗೆಯೇ ಕಷ್ಟಕರ ಪರಿಸ್ಥಿತಿ ಬಂದು ಒದಗಿದರೂ ತಾಳ್ಮೆಯಿಂದ ಸಹಿಸಿಕೊಳ್ಳಬೇಕಾಗುತ್ತದೆ. ನಂತರ ದಿನೇ ದಿನೇ ಅದು ಬೆಳೆಯುತ್ತಾ ನಡತೆಯನ್ನು ವೃದ್ಧಿಪಡಿಸಿಕೊಂಡು, ಇನ್ನೂ ಹೆಚ್ಚಿನ ಪರಿಶೋಧನೆಗಳಿಗೆ ಒಳಪಟ್ಟು ಅದರಿಂದ ಬಲಯುಕ್ತವಾಗಿ ಕೃಪಾ ಲಾವಣ್ಯಗಳಿಂದ ಶೋಭಿತವಾಗಿ, ಬಾಧೆಗಳ ಮುಖಾಂತರ ಸದೃಢವಾಗಿ ಅಭಿವೃದ್ಧಿಯಾಗಿ ನೆಲೆಗೊಂಡು ಸಿದ್ಧಿಗೆ ಬರುತ್ತದೆ-Z ’95, 107 (R9806). R1807

