3 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು, ಅವುಗಳನ್ನು ಹೊಂದುವವರಿಗೆ ಅವು ಜೀವವು, ದೇಹಕ್ಕೆಲ್ಲಾ ಅದೇ ಅರೋಗ್ಯವು. ಙ್ಞಾನೋಕ್ತಿಗಳು 4:20, 22
ಮನಸ್ಸು ದೇಹದ ಮೇಲೆ ಪ್ರಭಾವ ಬೀರುತ್ತದೆ ಎಂದು ಕೆಲವೇ ಜನರು ಮಾತ್ರ ಗುರುತಿಸುತ್ತಾರೆ. ದೇವರು ನಮ್ಮ ದೇಹ ರಚನೆಯನ್ನು ಹೇಗೆ ನಿರ್ಮಿಸಿದ್ದಾನೆಂದರೆ, ಸಾಮಾನ್ಯವಾಗಿ ಶುದ್ಧವಾದ, ಗಂಭೀರ ಹಾಗೂ ಪವಿತ್ರವಾದ ಯೋಚನೆಗಳು ನಮ್ಮ ಮಾನಸಿಕ ಹಾಗೂ ನೈತಿಕ ಸ್ಥಿತಿಯ ಮೇಲೆ ಉದಾತ್ತ ಹಾಗೂ ಉನ್ನತ ಪರಿಣಾಮವನ್ನು ಬೀರುವದಲ್ಲದೆ, ನಮ್ಮ ಭೌತಿಕ ದೇಹವನ್ನು ಚೈತನ್ಯಗೊಳಿಸುವುದು. ಅದರಂತೆಯೇ, ಇದಕ್ಕೆ ವಿರುದ್ಧವಾಗಿ ಅಶುದ್ಧ, ಪ್ರತಿಯೊಂದು ಅನೈತಿಕ, ಅಕ್ರಮ ಹಾಗೂ ದುಷ್ಟ ಯೋಚನೆಗಳು ಮತ್ತು ಕ್ರಿಯೆಗಳು ನಮ್ಮನ್ನು ಮಾನಸಿಕವಾಗಿಯೂ ಸಹ ಬಿದ್ದುಹೋಗಿರುವ ಮಾನವರಾದ ನಮ್ಮಲ್ಲಿ ತಳ ಊರಿರುವ ಅಸ್ವಸ್ತ ಜೀವಕೋಶಗಳಿಂದ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ-Z ’96, 1, 180 (R2013). R2014

