13 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಪ್ರೀತಿಯು ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ. ೧ ಕೊರಿಂಥದವರಿಗೆ 13:5
ಕರ್ತನ ಈ ಆಜ್ಞೆಯನ್ನು ಕಡೆಗಾಣಿಸುವವನು ತನ್ನನ್ನು ತಾನೇ ಮೋಸಗೊಳಿಸುವಂಥ ಕೆಟ್ಟ ಸಂದೇಹವನ್ನುಪಡುವ ಪ್ರವೃತ್ತಿಗೆ ಒಳಗಾಗುತ್ತಾನೆ. ತಾನು ಬೇರೆ ಎಲ್ಲಾ ವಿಷಯಗಳಲ್ಲಿ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ತನ್ನ ಸಹಚರರೊಂದಿಗೆ ಮೋಸಗೊಳ್ಳುವ ಕೆಟ್ಟತನವನ್ನು ಹೃದಯದಲ್ಲಿ ತುಂಬಿಕೊಂಡಿರುವ ಸಂದೇಹವನ್ನು ವ್ಯಕ್ತಪಡಿಸುತ್ತಾನೆ. ಹೀಗೆ ಆತನು ದೇವರಲ್ಲೂ ಸಂದೇಹಪಡಲು ಮುಂದಾಗುವನಲ್ಲದೆ, ಕರ್ತನ ಪ್ರೀತಿಗೆ ವಿರುದ್ಧವಾಗಿ ಅವನಲ್ಲಿನ ಮತ್ಸರ ಹಾಗೂ ಭ್ರಷ್ಟ ಮನಸ್ಸು ಹೋರಾಡುತ್ತದೆ. ಈ ಯುದ್ಧದಲ್ಲಿ ಯಾವುದಾದರೂ ಒಂದು ಜಯಶಾಲಿಯಾಗಲು ಸಾಧ್ಯ. ಆದುದರಿಂದ, ಕೆಟ್ಟ ಸ್ವಭಾವವನ್ನು ಭಕ್ತನಾದವನು ತೆಗೆದುಹಾಕಬೇಕು, ಇಲ್ಲದಿದ್ದರೆ, ಅವನನ್ನು ಈ ಸ್ವಭಾವವು ಕೆಡಿಸಿ ಭ್ರಷ್ಟನನ್ನಾಗಿಸುತ್ತದೆ. “ನೂತನ ಸೃಷ್ಟಿ”ಯು ಈ ದುರ್ಗುಣವನ್ನು ಅಂದರೆ, ಕೆಟ್ಟದಾಗಿ ಸಂದೇಹಪಡುವದನ್ನು ನಿರ್ಮೂಲ ಮಾಡಿದರೆ, ಈಗಿನ ಜೀವನದಲ್ಲಿ ಬರುವ ಕಷ್ಟಗಳು ಹಾಗೂ ಸುತ್ತುಗಟ್ಟುವ ಪಾಪವನ್ನು ಕೊನೆಯ ಪಕ್ಷದಲ್ಲಿ ಅರ್ಧದಷ್ಟಾದರೂ ಹೋರಾಡಿ ಗೆಲ್ಲಲು ಸಾಧ್ಯವಾಗುತ್ತದೆ-Z ’05, 212(R3594).

