24 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಧರ್ಮಶಾಸ್ತ್ರವು ನಮ್ಮ ಶರೀರಾಧೀನ ಸ್ವಭಾವದ ನಿಮಿತ್ತ ನಿರ್ಬಲವಾಗಿ ಯಾವ ಕೆಲಸವನ್ನು ಮಾಡಲಾರದೆ ಇತ್ತೋ ಅದನ್ನು ದೇವರೇ ಮಾಡಿದನು. ಏನೆಂದರೆ, ಆತನು ಪಾಪ ನಿವಾರಣೆಗಾಗಿ ತನ್ನ ಮಗನನ್ನು ಪಾಪಾಧೀನವಾದ ನರಭಾವದ ರೂಪದಲ್ಲಿ ಕಳುಹಿಸಿಕೊಟ್ಟು ನರಭಾವದಲ್ಲಿಯೇ ಪಾಪಕ್ಕೆ ಮರಣದಂಡನೆಯನ್ನು ವಿಧಿಸಿದನು. ಹೀಗಿರಲು ಶರೀರಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮಾನುಸಾರವಾಗಿ ನಡೆಯುವವರಾದ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮವು ನೆರವೇರುವದಕ್ಕೆ ಮಾರ್ಗವಾಯಿತು. ರೋಮಾಪುರದವರಿಗೆ 8:3, 4
ಈ ಭರವಸೆಗಳಲ್ಲಿ ನಮಗೆ ಶ್ರೇಷ್ಠವಾದ ಸಂತೈಸುವಿಕೆ ಹಾಗೂ ಸಮಾಧಾನಗಳು ದೊರಕಿವೆ. ಇವು ನಿಜವಾಗಿಯೂ ಆಶ್ಚರ್ಯಕರವಾದ ಸಜೀವ ವಾಕ್ಯಗಳಾಗಿವೆ. ಅವು ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸುತ್ತವೆ. ದೇವರು ಶಾರೀರಿಕ ಪರಿಪೂರ್ಣತೆಯನ್ನು ನಮ್ಮಿಂದ ನಿರೀಕ್ಷಿಸದೆ ಹೃದಯದ ಪರಿಪೂರ್ಣ ಇಂಗಿತವನ್ನು ಅಂಗೀಕರಿಸುವದಾದರೆ, ನಾವು ದೇವರು ಉದ್ದೇಶಿಸಿ ನೇಮಿಸಿರುವ ಪರಿಪೂರ್ಣ ಮಟ್ಟವನ್ನು ನಿರೀಕ್ಷೆಯುಳ್ಳವರಾಗಿ ತಲುಪಲು ಸಾಧ್ಯವಿಲ್ಲದೇ ಇದ್ದರೂ ಆಂತರ್ಯದಲ್ಲಿ, ಆತ್ಮೀಕವಾಗಿ ದೇವರ ಆತ್ಮದ ಅಗತ್ಯತೆಗೆ ಅನುಗುಣವಾಗಿ ನಡೆಯಲು ಸಾಧ್ಯವಾಗುತ್ತದೆ. ನಾವು ಮಾನಸಿಕವಾಗಿ ದೇವರಾತ್ಮನ ಅಗತ್ಯತೆಗೆ ತಕ್ಕಂತೆ ಪರಿಪೂರ್ಣ ಇಂಗಿತದಿಂದ ಕೂಡಿದವರಾಗಿ ನಡೆಯುವದನ್ನು ದೇವರು ಮೆಚ್ಚುವನು. ಇದನ್ನು ಅಂದರೆ ನಮ್ಮ ಪರಿಪೂರ್ಣ ಸಂಕಲ್ಪವನ್ನು ಪರಲೋಕದ ತಂದೆಯು ನಿರೀಕ್ಷಿಸುವನು-Z ’02, 248 R3060

