23 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
[ಯೆಹೋವನು] - ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು [ಅನ್ನುತ್ತಾನಲ್ಲಾ]. ಕೀರ್ತನೆಗಳು 32:8
ಆತ್ಮೀಕ ಇಸ್ರಾಯೇಲಿನ ಒಂದು ಬಹುಮುಖ್ಯವಾದ ಪಾಠವೇನೆಂದರೆ, ಜೀವನದ ಪ್ರತಿಯೊಂದು ನಡವಳಿಯಲ್ಲೂ ಕರ್ತನ ನಡಿಸುವಿಕೆಯನ್ನು ನಿರೀಕ್ಷಿಸುವುದಾಗಿದೆ, ಹಾಗೂ ಭೌತಿಕ ಅಥವಾ ಪಾರಮಾರ್ಥಿಕವಾಗಿರಲಿ ಕರ್ತನ ಚಿತ್ತವನ್ನು ಬಿಟ್ಟು ಮುಂದುವರಿಯಬಾರದು. ನಾವು ಪರಮ ಕಾನಾನಿಗೆ ಪ್ರಯಾಣ ಮಾಡುತ್ತಿರುವಲ್ಲಿ ನಮಗಾಗುವ ಎಲ್ಲಾ ಇತರೇ ಅನುಭವಗಳನ್ನು ಅನುಭವಿಸಿದರೆ ಮಾತ್ರ, ದೇವರ ವಾಗ್ದಾನಗಳನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ. ಹೀಗಿರುವಲ್ಲಿ ನಮಗಿರುವ ಪಾಠ ಪ್ರೇರಣೆಯಾಗಿರುತ್ತದೆ. ಕರ್ತನಿಗೆ ಎಲ್ಲಾ ರೀತಿಯಲ್ಲಿಯೂ ನಾವು ಗುಣಗುಟ್ಟದೆ ವಿಧೇಯರಾಗಿದ್ದುಕೊಂಡು ಆತನ ನಡೆಸುವಿಕೆಯನ್ನು ನಿರೀಕ್ಷಿಸುವದಾಗಿದೆ. ನಾವು ನಿರೀಕ್ಷಿಸಿದಂತೆ ಇದು ಸಂತೋಷದಾಯಕವಾಗಿರಬೇಕಾದರೆ ಹಿಂದೆ ನಮಗಾದ ಅನುಭವಗಳಿಂದ ಕಲಿತ ಪಾಠ ಹಾಗೂ ಇವುಗಳಿಗಿಂತ ಹೆಚ್ಚಾಗಿ ನಂಬಿಕೆ, ಕರ್ತನ ಶಕ್ತಿ ಮತ್ತು ಆತನ ನಂಬಿಗಸ್ತತೆಯಿಂದ ಆತನಲ್ಲಿ ನಾವಿಟ್ಟಿರುವ ವಿಶ್ವಾಸದಿಂದ ಮಾತ್ರ ಸಾಧ್ಯ-Z ’02, 251 (R3062). R3061

