15 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಯಾವನಾದರೂ ಆತನ ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಮೇಲಣ ಪ್ರೀತಿಯು ಪರಿಪೂರ್ಣವಾಗಿದೆ. ೧ ಯೋಹಾನನು 2:5
ವಿಧೇಯತ್ವವು ಒಂದು ಪರೀಕ್ಷೆ. ನಾವು ಯಾವ ಪ್ರಮಾಣದಲ್ಲಿ ದೇವರ ವಾಕ್ಯವನ್ನು ಕೈಕೊಂಡು ನಡೆಯುತ್ತೇವೋ ಅದೇ ಪ್ರಮಾಣದಲ್ಲಿ ದೇವರ ಮೇಲಣ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುವದು. ನಾವು ಕ್ರಿಸ್ತನ ಮನಸ್ಸನ್ನು ಸ್ವೀಕರಿಸಿದರೆ, ಅಂದರೆ ಪವಿತ್ರಾತ್ಮ (ಅಥವಾ ದೇವರ ಆತ್ಮ) ನಮ್ಮಲ್ಲಿದ್ದರೆ ಅದರಿಂದಾಗುವ ಪರಿಣಾಮವೇನೆಂದರೆ ದೇವರ ಚಿತ್ತ ಹಾಗೂ ಆತನ ಇಚ್ಚೆಯನ್ನು ನಮ್ಮ ಸಾಮಥ್ರ್ಯಕ್ಕೆ ಅನುಸಾರವಾಗಿ ನೆರವೇರಿಸಲು ಸಾಧ್ಯವಾಗುತ್ತದೆ. ಈ ಸಾಮಥ್ರ್ಯವು ಚಾಚೂ ತಪ್ಪದೆ ವರ್ಷದಿಂದ ವರ್ಷಕ್ಕೆ, ನಾವು ಪುನರುತ್ಥಾನದಲ್ಲಿ ನೂತನ ದೇಹವನ್ನು ಪಡೆಯುವವರೆಗೆ ವೃದ್ಧಿಯಾಗುತ್ತಿರಬೇಕು. ಈಗಿನ ಸ್ಥಿತಿಯಲ್ಲಿ ಪರಿಪೂರ್ಣತೆಯ ಮಟ್ಟವನ್ನು ತಲುಪಲು ಸಾಧ್ಯವಿಲ್ಲದೇ ಇದ್ದರೂ ನಮ್ಮ ಮನಸ್ಸನ್ನು ಹಾಗೂ ನಮ್ಮ ಚಿತ್ತವನ್ನು ಕರ್ತನಲ್ಲಿ ಲೀನಗೊಳಿಸಿ, ಆತನ ಅನ್ಯೋನ್ಯತೆಯಲ್ಲಿ ನಡೆಯುವದು ಪರಿಣಾಮಕಾರಿಯಾಗಿರುತ್ತದೆ. (1ಯೋಹಾನ 1:7)-Z ’97, 312 (R2235). R2236

