4 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ನನ್ನ ಪ್ರಜೆಗಳೇ, ಅವಳನ್ನು ಬಿಟ್ಟು ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುದಾರರಾಗಬಾರದು. ಪ್ರಕಟನೆ 18:4
ಯಾರಾರು “ನನ್ನ ಪ್ರಜೆಗಳೇ” ಎಂಬುದಾಗಿ ಕರ್ತನ ಕರೆಯುವಿಕೆಗೆ ವಿಧೇಯರಾಗಿ ಬಾಬೆಲ್ ನಗರಿಯನ್ನು ಬಿಟ್ಟು ಬಂದು ಯೋಗ್ಯರೆನಿಸಿಕೊಳ್ಳುವರೋ ಅವರು ಅವಳಿಗಾಗುವ ದಂಡನೆಯಲ್ಲಿ ಸೇರುವುದಿಲ್ಲ. ಯಾಕೆಂದರೆ, ವಿಧೇಯರಾಗಿ ಬರುವವರು ಬಾಬೆಲ್ ನಗರಿಯ ನೈಜತೆಯನ್ನು ಗಮನಿಸಿ, ತಾವು ಅವಳ ಪಾಪದಲ್ಲಿ ಸೇರಲಿಲ್ಲವೆಂಬುದನ್ನು ತಿಳಿದಿರುವರು. ಯಾರ್ಯಾರು ಸತ್ಯದ ಬೆಳಕು ಪ್ರಕಾಶಿಸಿರುವ ಪರಿಣಾಮವಾಗಿ ಅವಳ ದುರ್ಬೋಧನೆ, ದುರ್ಗುಣಗಳು ಹಾಗೂ ಅವಳ ಹೇಯವಾದ ಕಾರ್ಯಗಳು ಪ್ರಕಟವಾಗಿದ್ದರೂ ಅವಳನ್ನು ಬಿಟ್ಟು ಬರದೆ ಅವಳ ಜೊತೆಯಲ್ಲಿಯೇ ಉಳಿದಿದ್ದು ಅವಳನ್ನು ಅನುಮೋದಿಸುವವರು ಅವಳಿಗಾಗುವ ದಂಡನೆ, ಉಪದ್ರವಗಳನ್ನು ಅನುಭವಿಸಿ ಹಣಜಿ ತರಗತಿಗೆ ಸೇರಿದವರಾಗಿರುವರು-Z ’100, 3 R2553

