10 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಯೌವನಸ್ಥನೆಂದು ನಿನ್ನನ್ನು ಅಸಡ್ಡೆ ಮಾಡುವದಕ್ಕೆ ಯಾರಿಗೂ ಅವಕಾಶ ಕೊಡದೆ ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು. ೧ ತಿಮೊಥೆಯನಿಗೆ 4:12
ಪ್ರತಿಯೊಬ್ಬ ಕ್ರಿಸ್ತ ಭಕ್ತನು, ಇತರರಿಗೆ ತನ್ನ ಮಾದರಿಯನ್ನು ಅನುಸರಿಸುವ ಯೋಗ್ಯತೆಯನ್ನು ಸಂಪಾದಿಸಲು ಪ್ರಯತ್ನಿಸಬೇಕು. ಅಂದರೆ, ಕ್ರಿಸ್ತನ ಸೇವೆಯಲ್ಲಿ ಉತ್ಸುಕತೆಯನ್ನು ತೋರುವ ಹಾಗೂ ತನ್ನ ನಿತ್ಯ ಜೀವನದಲ್ಲಿ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುವ ಪ್ರಯಾಣಿಕನಾಗಿ ಹುಮ್ಮಸ್ಸಿನಿಂದ ಕ್ರಿಸ್ತನನ್ನು ಅನುಸರಿಸುವ ಮಾದರಿಯಾಗಿ ಜೀವಿಸಬೇಕು. ಆದರೆ, ಈಗಿನ ಜೀವನದಲ್ಲಿ ನಾವು ಮಹಿಮೆಯುಳ್ಳ ನೈತಿಕ ಸ್ಥಿತಿಯ ಪರಿಪೂರ್ಣ ಮಾದರಿಯನ್ನು ಧಾರ್ಮಿಕ ಪರಿಶುದ್ಧತೆಯನ್ನು ಪಡೆಯಲು ಸಾಧ್ಯವಿಲ್ಲ. ಈ ಮಹಿಮಾ ಗುಣ ಲಕ್ಷಣಗಳು ಕ್ರಿಸ್ತನಲ್ಲಿರುವದನ್ನು ನಾವು ಕಾಣಬಹುದು. ಈ ರೀತಿಯಲ್ಲಿ ನನ್ನನ್ನು ಅಥವಾ ನಮ್ಮನ್ನು ಅನುಸರಿಸಿರಿ ಎಂಬುದಾಗಿ ಅಪೋಸ್ತಲ ಪೌಲನು ಎಂದಿಗೂ ಹೇಳಲಿಲ್ಲ. ಆದರೆ, “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ” - ಎಂಬುದಾಗಿ ಹೇಳಿದ್ದಾನೆ. (1ಕೊರಿಂಥ 11:1) ಈತನು ಕ್ರಿಸ್ತನ ಮಾದರಿಯನ್ನು ಅನುಸರಿಸುವ ಒಂದು ಮಹಾ ಉದಾಹರಣೆಯಾಗಿದ್ದಾನೆಯೇ ಹೊರತು, ಕ್ರಿಸ್ತನಲ್ಲಿ ಅಡಕವಾಗಿರುವ ಮಹಿಮೆಯುಳ್ಳ ಪರಿಪೂರ್ಣತೆಯಲ್ಲ. ನಾವು ಆತನಲ್ಲಿದ್ದಂತೆ ಉತ್ಸುಕತೆ, ಆಸಕ್ತಿ ಹಾಗೂ ಕ್ರಿಸ್ತನನ್ನು ಅನುಸರಿಸಿ ಆತನ ಚಿತ್ತವನ್ನು ನೆರವೇರಿಸಬೇಕೆಂಬ ಕುತೂಹಲವನ್ನು ನಾವು ಅನುಕರಿಸುವವರಾಗಿರಬೇಕು-Z ’95, 251 (R1884). R1886

