27 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ. ಫಿಲಿಪ್ಪಿಯವರಿಗೆ 4:5
ಮೇಲ್ಕಂಡ ವಚನದಲ್ಲಿ ‘ಸೈರಣೆ’ ಎಂಬ ಪದವು ಗ್ರೀಕ್ ಭಾಷೆಯಲ್ಲಿನ (moderation) ಎಂಬ ಪದದ ಭಾಷಾಂತರವಾಗಿದ್ದು ಅದರ ಉದ್ದೇಶವು ಸೌಮ್ಯ ಉಳ್ಳದ್ದಾಗಿದ್ದು, ನಮ್ಮ ಹಕ್ಕನ್ನು ಪೂರ್ಣ ಒತ್ತಡದಿಂದ ಬಲಾತ್ಕರಿಸುವದಿಲ್ಲವೆಂಬುದಾಗಿ ಕಂಡುಬರುತ್ತದೆ. ಕ್ರಿಸ್ತನ ರಾಜ್ಯದಲ್ಲಿ ಸೇರುವ ಪ್ರತಿಯೊಬ್ಬರಿಗೂ ಕರುಣೆ ಮತ್ತು ಉದಾರ ಮನೋಭಾವ ಮುಂತಾದ ಗುಣಗಳು ಖಂಡಿತವಾಗಿ ಇರಲೇಬೇಕು. ಆದಷ್ಟುಮಟ್ಟಿಗೆ ನಾವು ನಿರ್ವಹಿಸುವ ದಿನನಿತ್ಯದ ಕರ್ತವ್ಯಗಳಲ್ಲಿ ನಂಬಿಗಸ್ತರಾಗಿಯೂ ಮತ್ತು ನ್ಯಾಯಕ್ಕನುಗುಣವಾಗಿಯೂ ವರ್ತಿಸಬೇಕು. ಅಲ್ಲದೆ, ಇತರರ ವಿಷಯವಾಗಿಯೂ ನಾವು ಕರುಣೆ ಹಾಗೂ ನೀತಿಬದ್ಧರಾಗಿ ನಡೆಯಬೇಕಾಗಿದೆ. ಹೀಗೆ ನಡೆದರೆ ನಾವು ದೇವರ ಮಕ್ಕಳು ಎಂದೆಣೆಸಿಕೊಳ್ಳುತ್ತೇವೆ. ಏಕೆಂದರೆ, ಪರಲೋಕದಲ್ಲಿರುವ ನಮ್ಮ ತಂದೆಯು ಕೃತಜ್ಞತೆ ಇಲ್ಲದವರ ವಿಷಯದಲ್ಲೂ ದಯ ತೋರಿಸುವವನಾಗಿದ್ದಾನೆ-Z ’03, 7 R3128

