5 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ದೇವರ ಚಿತ್ತವೇನೆಂದರೆ, ನೀವು ಶುದ್ಧರಾಗಿ ಇರಬೇಕೆಂಬುದೇ. ೧ ಥೆಸಲೊನೀಕದವರಿಗೆ 4:3
ದೇವರ ಚಿತ್ತವೇನೆಂಬುದನ್ನು ತಿಳಿಯಲಿಕ್ಕೆ ನಾವು ದೈವೋಕ್ತಿಗಳನ್ನು ಗಮನಿಸುವಾಗ, ದೇವರು ನಮ್ಮಿಂದ ನಿರೀಕ್ಷಿಸುವ ಮಹತ್ತಾದ ಕಾರ್ಯವು ಏನೆಂದರೆ, ನಾವು ಇತರರಿಗೋಸ್ಕರ ಕೆಲಸ ಮಾಡದೆ, ನಮ್ಮನ್ನು ದೇವರ ಚಿತ್ತಕ್ಕೆ ಒಳಪಡಿಸಿಕೊಂಡು, ಸ್ವಾರ್ಥತೆಯನ್ನು ಅಧೀನದಲ್ಲಿಟ್ಟುಕೊಂಡು ಜಯಸಾಧಿಸಿ ನಾವು ನಮ್ಮನ್ನೇ ಆಳುವದಾಗಿದೆ. ಮಿಕ್ಕ ಎಲ್ಲಾ ಕಾರ್ಯಗಳೆಂದರೆ, ನಮ್ಮ ಸೇವೆಯು ನಂಬಿಕೆಯ ಮನೆ ವಾರ್ತೆಯವರಿಗೆ ಹಾಗೂ ನಮ್ಮ ಸತ್ಕಾರ್ಯಗಳು ಎಲ್ಲಾ ಮನುಷ್ಯರಿಗೆ ಮನೆಯೊಳಗಿನಿಂದಲೂ ಮತ್ತು ವಿದೇಶ ಧರ್ಮ ಪ್ರಚಾರ ಸಂಸ್ಥೆಗಳ ಮೂಲಕವೂ ಸುವಾರ್ತಾ ಸೇವೆ ಮಾಡುವದು ಆಗಿದೆ. ಇವೆಲ್ಲವುಗಳಿಗಿಂತಲೂ ನಮ್ಮ ನಮ್ಮೊಳಗೆ ನಡೆಸುವ ಕಾರ್ಯ ಬಹು ಪ್ರಾಮುಖ್ಯವಾದುದಾಗಿದೆ. ದೈವ ಪ್ರೇರಣೆಗೊಳಗಾಗಿರುವ ಅಪೋಸ್ತಲನು ಘೋಷಿಸುವಂತೆ ನಾವು ದೇವರ ವಾಕ್ಯವನ್ನು ಇತರರಿಗೆ ನಿರರ್ಗಳವಾಗಿ ಪ್ರಚಾರ ಮಾಡಿದರೂ, ನಮ್ಮಲ್ಲಿರುವದೆಲ್ಲವನ್ನು ಬಡವರಿಗೆ ದಾನ ಮಾಡಿದರೂ, ಒಂದು ಒಳ್ಳೆಯ ಕಾರ್ಯದ ನಿಮಿತ್ತ ನಮ್ಮನ್ನು ನಾವು ಬಲಿದಾನ ಮಾಡಿದಾಗ್ಯೂ ದೇವರ ಪ್ರೀತಿ, ಕ್ರಿಸ್ತನ ಮನಸ್ಸು ಇವುಗಳು ನಮ್ಮಲ್ಲಿ ಅಭಿವೃದ್ಧಿಗೊಂಡು ನಮ್ಮನ್ನು ಆಳ್ವಿಕೆ ಮಾಡಿದರೂ ಪ್ರೀತಿ ಇಲ್ಲದೆ ಇದ್ದ ಪಕ್ಷದಲ್ಲಿ ದೇವರ ದಿವ್ಯ ದೃಷ್ಠಿಯಲ್ಲಿಯೂ ಹಾಗೂ ಆತನ ಎಣಿಕೆಯಲ್ಲಿ ನಾವು ಏನೂ ಇಲ್ಲದವರಾಗಿರುತ್ತೇವೆ-Z ’99, 4 (R2411). R2412

