19 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ, ಮಲಿನವಾದವರಿಗೂ, ನಂಬಿಕೆಯಿಲ್ಲದವರಿಗೂ ಯಾವದೂ ಶುದ್ಧವಲ್ಲ; ಅವರ ಬುದ್ಧಿಯೂ, ಮನಸ್ಸಾಕ್ಷಿಯೂ ಎರಡೂ ಮಲಿನವಾಗಿವೆ. ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯರೂ ಸತ್ಕಾರ್ಯಗಳಿಗೆಲ್ಲಾ ಅಪ್ರಯೋಜಕರೂ ಆಗಿರುವುದರಿಂದ ದೇವರನ್ನು ಅರಿಯೆವೆಂದು ತಮ್ಮ ಕಾರ್ಯಗಳಿಂದಲೇ ಹೇಳಿದಂತಾಯಿತು. ತೀತನಿಗೆ 1:15, 16
ಇದು ಎಂಥಹ ಭಯಂಕರ ಸ್ಥಿತಿ! ಎಲ್ಲಾ ದೇವ ಜನರು ಎಷ್ಟೋ ಎಚ್ಚರಿಕೆಯಿಂದಿರಬೇಕು. ಅವರು ಶುದ್ಧ ಹೃದಯ ಮತ್ತು ಶುದ್ಧ ಮನಸ್ಸುಗಳನ್ನು ಹೊಂದಿಕೊಳ್ಳುವದಲ್ಲದೆ ತಮ್ಮ ಮನಸ್ಸಾಕ್ಷಿಯನ್ನು ದೇವರ ವಾಕ್ಯಕ್ಕನುಸಾರವಾಗಿ ಕೋಮಲವಾಗಿಟ್ಟುಕೊಳ್ಳುವದು ಅತಿ ಮುಖ್ಯವಾದುದು. ಈ ಸ್ಥಿತಿಯನ್ನು ಉಳಿಸಿಕೊಂಡು ಮುಂದುವರೆಯಬೇಕಾದರೆ ನಮ್ಮನ್ನು ನಾವು ಆಗಾಗ, ಕಟ್ಟುನಿಟ್ಟಾಗಿ ದೇವರ ಪ್ರೀತಿಯ ನಿಯಮ ಹಾಗೂ ಆ ಮಟ್ಟದಲ್ಲಿ ತೀಕ್ಷ್ಣವಾಗಿ ಪರೀಕ್ಷಿಸಿಕೊಂಡು ಮುನ್ನಡೆಯಬೇಕಾಗಿದೆ. ನಾನು ಅಹಂಕಾರ ಅಥವಾ ಅಕ್ಕರೆಯ ಇಚ್ಚೆಯ ಅನುಭವದ ಮೊದಲ ಸಂಪರ್ಕ ಪಡೆದಾಗ, ಹತ್ತಿ ಉರಿಯುವ ಕಿಚ್ಚಿನಂತಿರುವ ಚಂಚಲ ಚಿತ್ತವನ್ನು ಶಾಂತವಾಗಿಸಲು ಮುಂದಾಗುತ್ತೇನೆ. - Z’99,214(R2516).

