25 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ ಅಂದನು. ಮತ್ತಾಯನು 4:4
ಮನುಷ್ಯನ ಜೀವನ ಅವನು ಹೊಂದಿರುವ ಯಥೇಚ್ಚವಾದ ವಸ್ತುಗಳಿಂದಲ್ಲ. ಉದಾಹರಣೆಗಾಗಿ ಆಹಾರ ಮತ್ತು ಉಡುಪು - ಇವುಗಳಿಂದಲ್ಲ ಎಂಬುದಾಗಿ ನಾವು ತಿಳಿಯಬೇಕು. ಆದರೆ, ಅವನ ಜೀವನ ಸಮೃದ್ಧಿಯಾಗಿಯೂ, ವೈಭವಪೂರಿತವಾಗಿಯೂ ಮತ್ತು ಉನ್ನತವಾಗಿಯೂ ಇರಬೇಕಾದರೆ ಅವನು ತನ್ನನ್ನು ದೇವರ ಚಿತ್ತಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಡುವದರ ಮೇಲೆ ಅವಲಂಬಿಸಿದೆ. ಹೀಗಾಗಲು ಅವನು ದೇವರ ಬಾಯಿಯಿಂದ ಹೊರಡುವ ಎಲ್ಲಾ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಬೇಕು; ಎಲ್ಲಾ ಬುದ್ಧಿ ಮಾತುಗಳು, ಪ್ರೋತ್ಸಾಹಕಾರಕ ಮಾತುಗಳು, ಪ್ರತಿಯೊಂದು ವಾಗ್ದಾನಗಳು ಇವೆಲ್ಲವೂ ದೇವರು ಈಗ ಕರೆದಿರುವವರ ಅಭಿವೃದ್ಧಿಯಾಗುವದಕ್ಕೂ, ನಿತ್ಯ ಜೀವವನ್ನು ಪಡೆಯಲಿಕ್ಕೂ ಮತ್ತು ಆತನ ಮಗನ ಸಾಮ್ರಾಜ್ಯದಲ್ಲಿ ಬಾಧ್ಯಸ್ಥರಾಗುವದಕ್ಕೂ ಅವಶ್ಯಕವಾಗಿವೆ. ಹೀಗಿರುವಲ್ಲಿ ಕರ್ತನ ಶಿಷ್ಯರೂ ಮತ್ತು ವಿದ್ಯಾರ್ಥಿಗಳಾಗಿರುವ ನಾವು ದೇವರ ಎಲ್ಲಾ ಮಾತುಗಳನ್ನು ನಮ್ಮ ಹೃದಯದಲ್ಲಿಟ್ಟುಕೊಂಡು ದೇವರು ಈ ವಾಕ್ಯದಲ್ಲಿ ನಮಗೆ ದಯಪಾಲಿಸಿರುವ ಉದ್ದೇಶವನ್ನು ನೆರವೇರಿಸೋಣ-Z ’02, 246,248 (R3058). R3060

