17 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ. ಯಾಕೆಂದರೆ, ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು ಅಂದನು. ಮತ್ತಾಯನು 11:29, 30
ಯಾರಾದರೂ ಈ ನೊಗವನ್ನು ಹೊರುವದಾದರೆ, ಅವರಿಗೆ ದೇವರ ವಾಕ್ಯದ ಭರವಸೆ ಇರುವದು. ಆದೇನೆಂದರೆ, ಎಲ್ಲಾ ಕಾರ್ಯಗಳು ಅವರ ಹಿತಕ್ಕಾಗಿಯೇ ನೆರವೇರುವದು; ಹಾಗೂ ಆ ನೊಗದ ಭಾರ ಎಷ್ಟು ಹೆಚ್ಚಾಗಿ ಅವರ ಮೇಲಿರುವದೋ ಅಷ್ಟೇ ಹೆಚ್ಚಾಗಿ ಆಶೀರ್ವಾದ ಹಾಗೂ ಕಾಲಕಾಲಕ್ಕೆ ಪ್ರತಿಫಲ ದೊರೆಯುವದು. ಜೊತೆಗೆ ಈಗಿನ ಜೀವಿತದಲ್ಲಿ ಅವರು ಎಷ್ಟು ಹೆಚ್ಚಾಗಿ ಕಹಿ ಅನುಭವಗಳನ್ನು ಅನುಭವಿಸುವರೋ ಅಷ್ಟೇ ಹೆಚ್ಚಾಗಿ ಅವರ ಮಹಿಮೆ ಮತ್ತು ಅವರ ಗುಣ ಪ್ರಕಾಶಿಸುವದು ಮತ್ತು ಅವರು ದೇವರ ರಾಜ್ಯದಲ್ಲಿ ಪ್ರವೇಶಿಸಲು ಅರ್ಹರಾಗುವರು. ಈ ಒಂದು ದೃಷ್ಠಿಯಲ್ಲಿ ಪ್ರತಿಯೊಂದು ನೊಗವು ಹಗುರವಾಗಿರುವದು. ಕಾರಣ ಕರ್ತನು ಅವರ ನೊಗವನ್ನು ಮೆಚ್ಚುವನು. ಇನ್ನೂ ಹೆಚ್ಚಾಗಿ ಹೇಳಬೇಕಾದರೆ ಆ ನೊಗವು ಬಹಳ ಹಗುರವಾಗಿರುವದು. ಏಕೆಂದರೆ ಕರ್ತನು ನಮ್ಮೊಂದಿಗೆ ಇರುತ್ತಾನೆ-Z ’00, 137 (R2623). R2625

