12 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ, ಸರ್ವ ಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ. ಯಾಕೋಬನು 1:4
ತಾಳ್ಮೆ ಎಂಬ ಗುಣವನ್ನು ಸಾಧಿಸದೆ ಇದ್ದ ಪಕ್ಷದಲ್ಲಿ ಅಭಿವೃದ್ಧಿಯಾಗುವ ಪಥದಲ್ಲಿ ಒಂದು ಹೆಜ್ಜೆಯೂ ಮುಂದಿಡಲು ಸಾಧ್ಯವಿರುವದಿಲ್ಲ. ಬೇರೆ ಎಲ್ಲಾ ಗುಣಗಳಿಗಿಂತ ಈ ಗುಣವು ಕ್ರಿಸ್ತೀಯ ಸಮಗ್ರ ಗುಣಗಳನ್ನು ಅಲಂಕರಿಸುತ್ತದೆ. ಲೋಕದ ಪ್ರಶಂಸನೆಗೆ ಅಥವಾ ಇನ್ನೊಂದು ರೀತಿಯಲ್ಲಿ ಸತ್ಯ ಪ್ರೇರಣೆ ಮಾಡುವ ಸರ್ವ ಸುಗುಣವುಳ್ಳ ದೇವರನ್ನು ಮಹಿಮೆಪಡಿಸುತ್ತದೆ. ಮಾನವ ಬಲಹೀನತೆ ಹಾಗೂ ಅಪರಿಪೂರ್ಣತೆಯೆಂಬ ಅಲೆಯನ್ನು ತಡೆಯುವದರಲ್ಲಿ ಈ ಸದ್ಗುಣವು ದೀರ್ಘಶಾಂತಿಯಿಂದ ಹೋರಾಡುತ್ತದೆ. ದೈವ ಹೋಲಿಕೆಯನ್ನು ಪುನಃ ಪಡೆಯಲು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತದೆ. ಇದು ಶೀಘ್ರವಾಗಿ ಕೋಪಿಸಿಕೊಳ್ಳುವದಿಲ್ಲ; ಆದರೆ, ಕ್ಷಮಾಗುಣವನ್ನು ವ್ಯಕ್ತಗೊಳಿಸುತ್ತದೆ. ಸತ್ಯ ಮತ್ತು ನೀತಿಯ ಪಥವನ್ನು ಶೀಘ್ರವಾಗಿ ಅರಿತುಕೊಳ್ಳುತ್ತದೆ. ಹಾಗೂ ಆ ಪಥದಲ್ಲಿ ತಪ್ಪದೆ ಮುಂದೆ ಸಾಗುತ್ತದೆ. ಅದು ತನ್ನ ಕೊರತೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಇತರರಲ್ಲಿ ಕಂಡುಬರುವ ಅಪರಿಪೂರ್ಣತೆ ಹಾಗೂ ಬಲಹೀನತೆಗಳನ್ನು ಗುರುತಿಸಿ ಸಹಾನುಭೂತಿಯನ್ನು ತೋರಿಸುತ್ತದೆ-Z ’93, 295 R3090

