18 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ನಿಮ್ಮ ದೇವರಾದ ಯೆಹೋವನು - ಇವರು ಸಂಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ತನ್ನನ್ನೇ ಪ್ರೀತಿಸುವವರು ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳುವದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾನೆ. ಧರ್ಮೋಪದೇಶಕಾಂಡ 13:3
ದೇವರ ರಾಜ್ಯ ಎಂಥವರಿಗೆ ಮೀಸಲಾಗಿದೆ ಎಂದರೆ, ಯಾರು ದೇವರ ಕೃಪೆಯಿಂದ ಹೃದಯಪೂರ್ವಕವಾಗಿ ಕ್ರಿಸ್ತನಂತಾಗುವರೋ ಅಂಥವರು ದೇವರನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಪ್ರೀತಿಸುತ್ತಾ, “ನನ್ನ ಚಿತ್ತವಲ್ಲ, ಸ್ವಾಮಿ ನಿನ್ನ ಚಿತ್ತವೇ ನನ್ನಲ್ಲಿ ನೆರವೇರಲಿ” ಎಂಬುದಾಗಿ ಹೇಳಿ ನೆರವೇರಿಸುವವರು ಈ ಷರತ್ತಿಗೆ ಬದ್ಧರಾಗಿ ತಮ್ಮನ್ನು ತಾವೇ ದೇವರಿಗೆ ಸಮರ್ಪಿಸಿಕೊಳ್ಳುವದು. ಇಂತವರನ್ನು ದೇವರು ಅಂಗೀಕರಿಸಿ ತನ್ನ ರಾಜ್ಯದಲ್ಲಿ ಸೇರಿಸಿಕೊಳ್ಳುವನು. ದೇವರನ್ನು ಸಂಪೂರ್ಣವಾಗಿ ಪ್ರೀತಿಸಿ, ತಮ್ಮನ್ನೇ ಆತನಿಗೆ ಸಮರ್ಪಿಸಿಕೊಳ್ಳುವ ಷರತ್ತಿಗಿಂತ ಬೇರೆ ಯಾವ ಷರತ್ತು ಇದಕ್ಕೆ ಸಾಟಿಯಾಗುವುದಿಲ್ಲ. ದೇವರು ತನ್ನನ್ನು ಉತ್ಕಷ್ಠವಾಗಿ ಪ್ರೀತಿಸುವವರ ಪರವಾಗಿ, ಕಣ್ಣು ಕಾಣದೆ ಇರುವ ಕಿವಿಯು ಕೇಳದೆ ಇರುವ ಹಾಗೂ ಅದರ ಭಾವನೆ ವ್ಯಕ್ತವಾಗದೇ ಇರುವ ಮತ್ತು ಮನುಷ್ಯನ ಹೃದಯದಲ್ಲಿ ಹೊಳೆಯದೇ ಇರುವಂಥ ಪರಲೋಕದ ಅತಿ ಶ್ರೇಷ್ಠವಾದ ಆಶೀರ್ವಾದಗಳನ್ನು ಮೀಸಲಾಗಿಟ್ಟಿದ್ದಾನೆ-Z ’98, 40 (R2257). R2258

