26 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ, ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ. ಫಿಲಿಪ್ಪಿಯವರಿಗೆ 4:4
ನಮ್ಮಲ್ಲಿ ಬಹಳಷ್ಟು ಮಂದಿ ಸಂತೋಷಿಸುವ ಕ್ರೈಸ್ತರಿಲ್ಲ ಅಥವಾ ಕರ್ತನಲ್ಲಿ ಸಂತೋಷಿಸುವರಾದರೂ ಅವರು ಹೆಚ್ಚಾದ ಸಂತೋಷಪಡುವವರಾಗಿಲ್ಲ. ಸಾಮಾನ್ಯವಾಗಿ ಗಲಾಟೆಯಿಂದಾಗಲಿ, ಅರಚಾಟುವಿಕೆಯಿಂದಾಗಲಿ ಈ ಸಂತೋಷಪಡುವದಲ್ಲ ಅಥವಾ ವಿರೋಧಿಸುವದೂ ಅಲ್ಲ. ಅದು ಪ್ರಶಾಂತತೆ, ಸಂತೋಷ, ಶಾಂತಿ ಮತ್ತು ಆತ್ಮಾನಂದದಿಂದ ಕೂಡಿರುವ ಸಂತೋಷವಾಗಿದೆ; ಆದಾಗ್ಯೂ ಕೆಲವರು ತಪ್ಪಾಗಿ ತಿಳಿದಿರುವಂತೆ, ಸಂತೋಷಪಡಲು ಅಬ್ಬರಿಸುತ್ತಾ ಗಲಾಟೆಯಿಂದ ಕೂಗಾಟ ಮಾಡುವದು ಅವಶ್ಯವೆಂಬ ಅರ್ಥವಲ್ಲ. ಯಾರು ಕರ್ತನ ಸಂಸರ್ಗದಲ್ಲಿ ಬಹಳ ಹತ್ತಿರವಿರುತ್ತಾರೋ ಅಂಥವರು ಮಾತ್ರ ಯಾವಾಗಲೂ ಸಂತೋಸಿಸುವದಕ್ಕೆ ಸಾಧ್ಯ. ಅಂಥವರು ಕರ್ತನಲ್ಲಿ ತಾವು ಐಕ್ಯವಾಗಿದ್ದೇವೆ ಎಂಬುದನ್ನು ಅರಿಯುತ್ತಾರೆ. ಅಲ್ಲದೆ ಆತನ ರಕ್ಷಣೆ ಮತ್ತು ಆರೈಕೆ ಅವರಿಗೆ ಇರುತ್ತದೆ ಹಾಗೂ ಆತನ ವಾಗ್ದಾನವು ಖಂಡಿತವಾಗಿದೆ. ಅದೇನೆಂದರೆ ಎಲ್ಲಾ ವಿಷಯಗಳು ಅವರ ಕ್ರಿಸ್ತೀಯ ಜೀವನದ ಅಭ್ಯುದಯಕ್ಕಾಗಿ ನೆರವೇರುತ್ತಿರುವವು ಎಂಬುದನ್ನು ಮನಗಂಡು ಕರ್ತನಲ್ಲಿ ಸಂತೋಷಿಸುವರು-Z ’03,7 (R3127). R3128

