16 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಮಾನ, ಅವಮಾನ, ಕೀರ್ತಿ, ಅಪಕೀರ್ತಿಗಳನ್ನು ಹೊಂದಿದವರೂ ಆಗಿದ್ದೇವೆ. ಮೋಸಗಾರರೆನಿಸಿಕೊಂಡರೂ ಸತ್ಯವಂತರೂ ................. ನಿಂದೆಗೆ ಅವಕಾಶ ಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗಮಾಡಿಕೊಳ್ಳುತ್ತೇವೆ. ೨ ಕೊರಿಂಥದವರಿಗೆ 6:3, 8
ನಮ್ಮ ಕರ್ತವ್ಯವನ್ನು ಹಾಗೂ ನಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ನಮ್ಮ ಸಾಮಥ್ರ್ಯಕ್ಕನುಸಾರವಾಗಿ ನಿರ್ವಹಿಸುತ್ತಿರುವಾಗ ಆತನ ಆಶೀರ್ವಾದ ಹಾಗೂ ಆತನ ಸಹಾಯ ನಮ್ಮ ಮೇಲೆ ಧಾರಾಕಾರವಾಗಿ ಸುರಿಯುತ್ತಿರುವ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಸಂಕಷ್ಟ ಉದ್ಭವಿಸಿ ನಮಗೆ ವಿರುದ್ಧವಾದ ಘಟನೆ ಸಂಭವಿಸಬಹುದು. ಆಗ ಕತ್ತಲೆಯ ಶಕ್ತಿಗಳು ನಮ್ಮ ಮೇಲೆ ಆಕ್ರಮಣ ನಡಿಸಿ ಒಂದು ಗಳಿಗೆ ನಮ್ಮ ಜೊತೆಗಾರರ ತೀರ್ಮಾನದಲ್ಲಿ ನಾವು ತಪ್ಪು ಮಾಡಿರುವವರಂತೆ ಕಂಡುಬರಬಹುದು. ಇಂತಹ ಅನುಭವಗಳು ನಮಗಾಗುವದು ಅವಶ್ಯ ಎನ್ನುವದರಲ್ಲಿ ಅನುಮಾನವೇ ಇಲ್ಲ. ಮತ್ತು ನಾವು ದೈವಾನುಗ್ರಹದಿಂದ ತ್ಯಜಿಸಲ್ಪಟ್ಟವರಂತೆ ತೋರಬಹುದು. “ನಾನು ಬೆಳಕಿನಲ್ಲಿ ಒಬ್ಬನೇ ಪ್ರಯಾಣ ಮಾಡುವದಕ್ಕಿಂತ ಕತ್ತಲೆಯಲ್ಲೇ ದೇವರ ಜೊತೆಯಲ್ಲಿ ನಡೆಯುವುದೇ ಲೇಸು”, ಎಂಬುದಾಗಿ ಹಾಡಿದರೂ ನಾವು ನಮ್ಮನ್ನು ಕೊಚ್ಚಿಕೊಂಡಂತಾಗುತ್ತದೆ. ನಮ್ಮ ನಂಬಿಕೆ ಮತ್ತು ಭರವಸೆಯನ್ನೂ ಅಭಿವೃದ್ಧಿಗೊಳಿಸಬೇಕಾದರೆ ಈ ರೀತಿಯ ತೀವ್ರ ಪರೀಕ್ಷೆಗೆ ಒಳಪಡುವಂಥ ಅನುಭವಗಳು ನಮಗಾಗಬೇಕಾಗಿದೆ. ಆಗ ನಾವು ಕರ್ತನನ್ನು ಆಶ್ರಯಿಸಿಕೊಂಡು ಆತನ ದೈವಾನುಗ್ರಹಕ್ಕೆ ಪಾತ್ರರಾಗಿ ಎಷ್ಟೇ ಕತ್ತಲು ನಮ್ಮನ್ನು ಆವರಿಸಿಕೊಂಡಿದ್ದರೂ ನಾವು ಕರ್ತನ ಅನ್ಯೋನ್ಯತೆಯಲ್ಲಿ ನಡೆಯಲು ಸಾಧ್ಯವಾಗುತ್ತದೆ-Z ’01, 314 (R2885). R2886

