20 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ಸದ್ಭಕ್ತನೆಂದಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣ ಹಾಕದೆ ........... ಅವನ ಭಕ್ತಿ ನಿಷ್ಪ್ರಯೋಜನವಾಗಿದೆ. ಯಾಕೋಬನು 1:26
ನಾಲಿಗೆಯು ಹೃದಯವನ್ನು ಬಿಂಬಿಸುತ್ತದೆ. ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು. ಕಡಿವಾಣವಿಲ್ಲದ ನಾಲಿಗೆ ಸ್ವಾರ್ಥತೆಯಿಂದಲೂ, ವೈರತ್ವದಿಂದಲೂ, ಕಠೋರವಾಗಿಯೂ ಬಡಾಯಿ ಕೊಚ್ಚುತ್ತಾ ಹಾಗೂ ಸುಳ್ಳು ಆಪಾದನೆಗಳಿಂದ ಕೂಡಿರುವ ಮಾತುಗಳನ್ನು ಹೊರಹಾಕುತ್ತದೆ. ಇದು ಕ್ರಿಸ್ತನ ಆತ್ಮವಿಲ್ಲದ ಅಪವಿತ್ರ ಮತ್ತು ಅಶುದ್ಧ ಹೃದಯದಿಂದ ಬಾಯಲ್ಲಿ ಬರುವದನ್ನು ರುಜುವಾತುಪಡಿಸುತ್ತದೆ. ಇಲ್ಲಿಯವರೆಗೆ ಯಾವುದೇ ಧರ್ಮವು ಸಿದ್ಧಿಗೆ ಬಂದಿದ್ದರೂ ಇಂಥಹ ಹೃದಯವುಳ್ಳವನು ರಕ್ಷಣೆಯನ್ನು ಹೊಂದಿಲ್ಲ; ಅಥವಾ ರಕ್ಷಣೆ ಹೊಂದುವ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ. ಆದರೆ, ಘನ ವೈದ್ಯನಾದ ಕ್ರಿಸ್ತನು ಈ ಕಹಿಯಾದ ಹೃದಯವನ್ನು ವಾಸಿ ಮಾಡಿ ಸ್ವಸ್ಥತೆಯನ್ನುಂಟುಮಾಡಲು ಆತನ ಬಳಿಯಲ್ಲಿರುವ ಔಷಧಿಯನ್ನು ಸರಿಯಾಗಿ ನಿಯಮಿತವಾಗಿ ಸ್ವೀಕರಿಸುವ ಪಕ್ಷದಲ್ಲಿ ಆ ಕಹಿಯಾದ ಹೃದಯವು ಸಿಹಿಯಾಗಿ ಮಾರ್ಪಡುವದು-Z ’99, 215 R2517

