11 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ, ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ, ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ, ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಹೀಗೆಯೇ ಹಿಂಸೆಪಡಿಸಿದರಲ್ಲಾ. ಮತ್ತಾಯನು 5:11, 12
ದೇವರ ಸೇವೆಯಲ್ಲಿ ಕ್ರಿಯಾತ್ಮಕವಾಗಿ ನಿರತರಾಗಿರುವ ಭಕ್ತರನ್ನು ಹಿಂಸಿಸುವದು ಹಾಗೂ ವಿರೋಧಿಸುವುದು ಅನಿವಾರ್ಯ ಹಾಗೂ ಸಹಜವಾದದ್ದು. ಈ ಪರಿಸ್ಥಿತಿಯನ್ನು ಭಕ್ತರು ಯಥಾರ್ಥತೆಯಿಂದಲೂ, ಸಮರ್ಥನೆಯಿಂದಲೂ ಎದುರಿಸಬೇಕು. ಒಂದು ವೇಳೆ ವಿರೋಧಿಯು ತನ್ನ ಸಹಜ ಗುಣದಲ್ಲಿ ಮುಂದುವರಿದರೆ ಅವನಿಗೆ ಎಚ್ಚರಿಕೆ ಹೇಳಿ ಅವನು ಹೋಗುವ ಮಾರ್ಗವನ್ನು ಬಿಟ್ಟುಬಿಡಬೇಕು. ನಾವು ಇವನನ್ನು ತೊರೆದು ಇತರರಿಗೆ ರಕ್ಷಣೆಯ ಸಂದೇಶವನ್ನು ನೀಡಲು ಮುಂದಾಗಬೇಕು. ನಮ್ಮ ಕರ್ತನು ಇಂತಹ ವಿರೋಧವನ್ನು ನಿಭಾಯಿಸುವಾಗ ಅನುಸರಿಸಿದ ಮಾರ್ಗ ಹಾಗೂ ನಡತೆಯಿಂದ ನಮಗೆ ಉತ್ಕøಷ್ಠವಾದ ಪಾಠ ದೊರೆಯುತ್ತದೆ-Z ’94, 368 (R1735). R1736

