29 ಫೆಬ್ರವರಿರ ದೈನಂದಿನ ಭಕ್ತಿಚಿಂತನೆ
ದೇವರು ಪ್ರೀತಿ ಸ್ವರೂಪಿ; ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ. ದೇವರು ಅವನಲ್ಲಿ ನೆಲೆಗೊಂಡಿದ್ದಾನೆ. ೧ ಯೋಹಾನನು 4:16
ನ್ಯಾಯವನ್ನು ಒಂದು ಅಳತೆಯ ಮಟ್ಟಿಗೆ ತುಂಬಲು ಸಾಧ್ಯ. ಆದರೆ, ಪ್ರೀತಿಯು ಅದನ್ನು ಕುಲುಕಿಸಿ ಅದುಮಿ, ಅಳತೆ ಮೀರಿ ತುಂಬಿದ ರಾಶಿಯನ್ನಾಗಿ ಮಾಡಿ, ನ್ಯಾಯದ ಅಳತೆಯನ್ನು ಹೊರಸೂಸುತ್ತದೆ. ಪ್ರೀತಿಯನ್ನು ಆಗ್ರಹಪೂರ್ವಕವಾಗಿ ನಿರೀಕ್ಷಿಸಲಾಗುವದಿಲ್ಲ ಅಥವಾ ಅದರಲ್ಲಿ ಏನೋ ಒಂದು ಕೊರತೆ ಇದೆ ಎಂದು ತೆಗಳಲು ಸಾಧ್ಯವಿಲ್ಲ. ಅದನ್ನು ಕೃತಜ್ಞತೆಯಿಂದಲೂ, ಗಂಭೀರತೆಯಿಂದಲೂ ಅಂಗೀಕರಿಸಿ ವಿನಿಮಯ ಮಾಡುವದಾಗಿದೆ. ಈ ಗುಣವನ್ನು ಬಯಸುವವನು ಅದನ್ನು ಅತಿ ಶ್ರೇಷ್ಠ ದರ್ಜೆಯಲ್ಲಿ ಕೊಂಡಾಡುವವನಾಗಿ ಗಾಂಭೀರ್ಯದಿಂದ ಬಯಸತಕ್ಕದ್ದಾಗಿದೆ. ಇಂಥಹ ಪ್ರೀತಿಯು ಬಹು ಬೆಲೆಯುಳ್ಳದ್ದು. ಇದನ್ನು ಇತರೆ ಗೌರವಾನ್ವಿತ ವ್ಯಕ್ತಿಗಳು ಅವರು ಹೊಂದಿದ ಉದಾತ್ತ ಸ್ವಭಾವದ ಮುಖಾಂತರವಾಗಿ ಆ ಗುಣಗಳನ್ನು ನಿರೀಕ್ಷಿಸಿ ಪಡೆಯಬೇಕಾಗಿದೆ-Z ’02, 266 (R3070). R3071

