29 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡುವ ಪ್ರತಿಜ್ಞೆಯನ್ನು ನಿಶ್ಚಂಚಲವಾಗಿ ಪರಿಗ್ರಹಿಸೋಣ; ವಾಗ್ದಾನ ಮಾಡಿದಾತನು ನಂಬಿಗಸ್ತನು. ಇಬ್ರಿಯರಿಗೆ 10:23
ನಮ್ಮ ಎಲ್ಲಾ ನಿರೀಕ್ಷೆಯು, ನಮ್ಮ ಗುಣವಾಗಲಿ ಅಥವಾ ಮುಂದಣ ಮಹಿಮೆಯಾಗಲಿ ಇವೆಲ್ಲವು ದೇವರು ನಮಗೆ ಮಾಡಿರುವ ವಾಗ್ದಾನವೆಂಬ ಬುನಾದಿಯ ಮೇಲೆ ಕಟ್ಟಲಾಗಿದೆ. ಈ ಬೆಲೆ ಕಟ್ಟಲಾಗದ ಸತ್ಯವನ್ನು ನಾವು ಯಾವ ವಿಧದಲ್ಲೂ ಅಥವ ಯಾವ ಅಳತೆಯಲ್ಲೂ ಪರಸ್ಪರ ಅಂಗೀಕರಿಸದ ಅಕ್ಷರಶಃ ಸತ್ಯವನ್ನು ಭದ್ರವಾಗಿ ಹಿಡಿದಿರುವದಲ್ಲದೆ, ಅದರ ಭಾವವನ್ನು ನಮ್ಮದಾಗಿಸಿಕೊಳ್ಳೋಣ; ಯಾಕಂದರೆ ನಾವು ಅದನ್ನು ಪ್ರೀತಿಸುತ್ತೇವೆ. ಇದು ವಾಸ್ತವವಾಗಿದೆ. ಅಲ್ಲದೆ ಸುಂದರವಾಗಿಯೂ ಮತ್ತು ಮಹಿಮೆಯಿಂದ ಕೂಡಿದೆ. ಆದÀರೆ, ಒಂದು ವಿಷಯವನ್ನು ಮಾತ್ರ ಮರೆಯಬಾರದು, - ಅದೇನೆಂದರೆ, ಎಲ್ಲವನ್ನೂ ದೀರ್ಘಶಾಂತಿಯಿಂದ ಸಹಿಸಿಕೊಳ್ಳಬೇಕು. ಆಗ ನಾವು ಕ್ರಿಸ್ತೀಯ ಗುಣಗಳನ್ನು ಕಲಿತು ಅಭ್ಯಾಸ ಮಾಡುವಾಗ ನಮಗೆ ಒದಗಿಬರುವ ಪರೀಕ್ಷೆಗಳು ಶೋಧನೆಗಳನ್ನು ಸಂತೋಷವಾಗಿ ಸ್ವೀಕರಿಸಬಹುದು. ನಮಗೆ ಒದಗಿಬರುವ ಸಂಕಷ್ಟಗಳು ಮತ್ತು ಹಿಂಸೆಗಳನ್ನು ದೇವರು ತನ್ನ ಚಿತ್ತದಂತೆ, ಇವುಗಳಿಗೆ ಅವಕಾಶ ಕೊಟ್ಟು ನಮ್ಮ ನಂಬಿಕೆಯನ್ನು ಪರೀಕ್ಷಿಸುವಾಗ, ಅವುಗಳು ನಮ್ಮ ಪ್ರಾಮುಖ್ಯವಾದ ಗುಣವನ್ನು ವೃದ್ಧಿಪಡಿಸಲಿಕ್ಕೆ ಎಂಬದಾಗಿ ಗ್ರಹಿಸಬೇಕು. ಏಕೆಂದರೆ ಈ ಗುಣ ಒಂದು ಮಹತ್ವ್ವವುಳ್ಳದ್ದು. ಈ ಗುಣವಿಲ್ಲದೆ ನಾವು ಪರಿಪೂರ್ಣ ಪ್ರೀತಿಯುಳ್ಳವರಾಗಿರಲು ಅಥವಾ ಅದನ್ನು ಪಡೆದು ಮುಂದುವರಿಯುತ್ತೇವೆ ಎಂದಾಗಲಿ ಸಾಧ್ಯವಿಲ್ಲ-Z ’01, 119 (R2790). R2793

